Sunday, November 24, 2024
ಸುದ್ದಿ

ರಕ್ಷಣಾ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಸ್ಥಾಪನೆಗೆ ಮುಂದಾದ ಕೇಂದ್ರ ಸರಕಾರ- ಕಹಳೆ ನ್ಯೂಸ್

ಬಾಹ್ಯಾಕಾಶ ಸಮರದಲ್ಲಿ ಹೋರಾಡುವ ದೇಶದ ಸಶಸ್ತ್ರ ಪಡೆಗಳ ಸಾಮರ್ಥ್ಯ ವರ್ಧನೆಗಾಗಿ ಹೊಸ ಸಂಸ್ಥೆಯೊಂದನ್ನು ಸ್ಥಾಪಿಸುವ ಪ್ರಸ್ತಾವಕ್ಕೆ ಸರಕಾರ ಅನುಮೋದನೆ ನೀಡಿದೆ.

ರಕ್ಷಣಾ ಬಾಹ್ಯಾಕಾಶ ಸಂಶೋಧನೆ(ಡಿ.ಎಸ್.ಆರ್.ಓ)ಎಂದು ಕರೆಯಲ್ಪಡುವ ಈ ನೂತನ ಸಂಸ್ಥೆಯನ್ನು ಸ್ಥಾಪಿಸುವ ಪ್ರಸ್ತಾವಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಭದ್ರತಾ ಕ್ಯಾಬಿನೆಟ್ ಸಮಿತಿಯು ಅನುಮೋದನೆ ನೀಡಿದೆ.
ಅಂತೆಯೇ ದೇಶದ ಶಸ್ತ್ರಾಸ್ತ್ರ ಪಡೆಗಳಿಗೆ ಬಾಹ್ಯಾಕಾಶ ಸಮರದಲ್ಲಿ ಶಕ್ತಿಯುತವಾಗಿ ಹೋರಾಡಲು ಅವಶ್ಯವಿರುವ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಮತ್ತು ತಂತ್ರಜ್ಞಾನವನ್ನು ಡಿ.ಎಸ್.ಆರ್.ಓ ರೂಪಿಸಲಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಹೇಳಿರುವುದನ್ನು ಎಎನ್‍ಐ ವರದಿ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿ.ಎಸ್.ಆರ್.ಓ ಸ್ಥಾಪಿಸುವ ಆಲೋಚನೆಯು ಜಂಟಿ ಕಾರ್ಯದರ್ಶಿ ಮಟ್ಟದ ವಿಜ್ಞಾನಿಗಳಲ್ಲಿ ಕೆಲ ಸಮಯದ ಹಿಂದೆಯೇ ಚಿಗುರೊಡೆದಿತ್ತು. ಇದೀಗ ಅಂತಿಮವಾಗಿ ಅದನ್ನು ಸಾಕಾರಗೊಳಿಸಲಾಗುತ್ತಿದೆ. ಡಿ.ಎಸ್.ಆರ್.ಓಗೆ ಈ ನಿಟ್ಟಿನಲ್ಲಿ ವಿಜ್ಞಾನಿಗಳ ತಂಡವೊಂದನ್ನು ಒದಗಿಸಲಾಗುವುದು. ಈ ತಂಡವು ದೇಶದ ಮೂರೂ ಪಡೆಗಳ ಮುಖ್ಯಸ್ಥರೊಂದಿಗೆ ನಿಕಟವಾಗಿ ಕೆಲಸ ಮಾಡಲಿದೆ ಎಂದು ವರದಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು