ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ‘ವಿಶ್ವ ಆಹಾರ ಸುರಕ್ಷಾ ದಿನದ’ ಅಂಗವಾಗಿ ನಡೆದ ನಾಲ್ಕು ದಿನದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ದಿನಾಂಕ 11.06.2019ರಂದು ಫ್ಯಾಕ್ಟರಿ ಆವರಣದಲ್ಲಿ ನಡೆಯಿತು .
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷರಾದ ಶ್ರೀ ಎಸ್.ಆರ್ ಸತೀಶ್ಚಂದ್ರ ಅವರು ವಹಿಸಿ ಮಾತನಾಡಿ “ವೈಯುಕ್ತಿಕವಾಗಿ ವ್ಯಕ್ತಿ ಬೆಳೆದಾಗ ಸಮಾಜವು ಕೂಡಾ ಬೆಳೆಯುತ್ತದೆ”,” ಕೆಲವೊಂದು ವಿಶೇಷ ಕಲೆಗಳು ಅನುವಂಶೀಯವಾಗಿ ಕೊಡುಗೆಯಾಗಿ ಬಂದಿದೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಂತಹ ವಿಶೇಷ ಶಕ್ತಿಯಿದ್ದು ಅದನ್ನು ಹೊರತರುವ ಪ್ರಯತ್ನ ನಡೆಯಬೇಕು” ಎಂದು ಹೇಳಿದರು.
ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುರೇಶ್ ಭಂಡಾರಿ ಮಾತಾಡಿ ” ಹೊಸತನವನ್ನು ಅಳವಡಿಸಿಕೊಳ್ಳುವ ಮೂಲಕ ಫ್ಯಾಕ್ಟರಿಯನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಿದ್ದು ಎಲ್ಲರೂ ಸಮರ್ಪಣಾ ಭಾವದಿಂದ ಕೊಡುಗೆ ನೀಡಿದಾಗ ಇದು ಸಾಧ್ಯ ಎಂದರು .
ನೆಸ್ಲೆ ಘಟಕದ ಮುಖ್ಯಸ್ಥರಾದ ಶ್ರೀ ಪ್ರದೀಪ್ ವಲ್ಸಲಾ ,ಕ್ಯಾಂಪ್ಕೋ ಉತ್ಪದನಾ ಘಟಕದ ಎ.ಜಿ.ಮ್ ಶ್ರೀ ಅನೂಪ್ ,ತಾಂತ್ರಿಕ ಎ.ಜಿ.ಎಮ್ ಶ್ರೀ ಶ್ಯಾಮ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶ್ರೀ ರಾಕೇಶ್ ಕಾರ್ಯಕ್ರಮ ನಿರೂಪಿಸಿದರು. ಶ್ರೀರಾಧೇಶ್ ಕುಂದಲ್ಪಾಡಿ ಸ್ವಾಗತಿಸಿ,ಶ್ರೀ ಜೀವನದಾಸ್ ರೈ ವಂದಿಸಿದರು, ಶ್ರೀ ಶ್ರೀನಿವಾಸ ಕುಂಜತ್ತಾಯ ,ಶ್ರೀ ರಾಜೇಶ್ ,ಶ್ರೀ ಪ್ರಶಾಂತ್ ಡಿ.ಎಸ್,ಪಿ.ಪಿ ಜೈನ್,ಶ್ರೀಪ್ರಮೋದ್ ಕೆ .ಯು ಗುಂಪು ಚಟುವಟಿಕೆಗಳನ್ನು ನಡೆಸಿಕೊಟ್ಟರು.