ಬೆಂಗಳೂರು: ಕೆಎಂಎಫ್ ಉತ್ಪನ್ನದ ನಂದಿನಿ ಹಾಲು ಇದೀಗ ದೆಹಲಿಯನ್ನೂ ತಲುಪಿದೆ. ಪ್ರತಿನಿತ್ಯ 2 ಲಕ್ಷ ಲೀಟರ್‌ನಷ್ಟು ನಂದಿನಿ ಹಾಲನ್ನು ದೆಹಲಿಗೆ ಪೂರೈಕೆ ಮಾಡಲಾಗುತ್ತದೆ.
ದೆಹಲಿಯ ಮದರ್ ಡೇರಿ ಸಂಸ್ಥೆ ದೆಹಲಿಯಲ್ಲಿ ಹಸುವಿನ ಹಾಲನ್ನು ಚಿಲ್ಲರೆ ಪೊಟ್ಟಣ ರೂಪದಲ್ಲಿ ಮಾರಾಟ ಮಾಡಲು ಆರಂಭಿಸಿದೆ. ದೆಹಲಿ ಸುತ್ತಮುತ್ತ ಗುಣಮಟ್ಟದ ಹಸುವಿನ ಹಾಲು ದೊರೆಯುತ್ತಿಲ್ಲ ಎಂದು ಕೆಎಂಎಫ್‍ಗೆ ಬೇಡಿಕೆ ಬಂದಿದೆ.
1900ರಲ್ಲಿ ಮದರ್ ಡೇರಿ ಸಂಸ್ಥೆ ರೈಲು ಟ್ಯಾಂಕರ್‌ಗಳ ಮೂಲಕ ಪಶ್ಚಿಮ ಬಂಗಾಳದ ಕೋಲ್ಕತ್ತಕ್ಕೆ ಹಾಲು ಸರಬರಾಜು ಮಾಡುತ್ತಿತ್ತು. ಇತ್ತೀಚೆಗಷ್ಟೆ ಕೆಎಂಎಫ್ ಪ್ರಾಯೋಗಿಕವಾಗಿ ಸುಮಾರು 43 ಸಾವಿರ ಲೀಟರ್ ಸಾಂದ್ರೀಕರಿಸಿದ ನಂದಿನಿ ಹಾಲನ್ನು ಆಂಧ್ರ ಪ್ರದೇಶದ ರಾಣಿಗುಂಟಾ ರೈಲ್ವೆ ನಿಲ್ದಾಣದಿಂದ ರೈಲ್ವೆ ಟ್ಯಾಂಕರ್ ಮೂಲಕ ಸರಬರಾಜು ಮಾಡಿದೆ.
ದೆಹಲಿಯ ಮದರ್ ಡೈರಿಗೆ ಸರಬರಾಜು ಮಾಡುವ ನಂದಿನಿ ಹಾಲು ಗುಣಮಟ್ಟದಲ್ಲಿ ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿನಿತ್ಯ ಎರಡು ಲಕ್ಷ ಲೀಟರ್ ಹಾಲು ಪೂರೈಸುವಂತೆ ಮದರ್ ಡೈರಿ ಬೇಡಿಕೆಯನ್ನು ಇಟ್ಟಿದೆ. ಕೆಎಂಎಫ್ ಇದುವರೆಗೂ ಹೊರರಾಜ್ಯಕ್ಕೆ ಹಾಲು ಪೂರೈಸಿದ್ದು ಅಂದರೆ ಅದು ತಿರುಪತಿಗೆ ಮಾತ್ರ ಇದು ಒಂದು ಸವಾಲಿನ ಕೆಲಸವೇ ಆಗಿದೆ.