Saturday, November 23, 2024
ಸುದ್ದಿ

ಉಪ್ಪಿನಂಗಡಿಯಲ್ಲಿ ಸಜ್ಜಾಗಿ ನಿಂತ ಗೃಹ ರಕ್ಷಕ ದಳ – ಕಹಳೆ ನ್ಯೂಸ್

ಉಪ್ಪಿನಂಗಡಿ; ಗೃಹರಕ್ಷಕದಳದ ಪ್ರವಾಹರಕ್ಷಣಾ ತಂಡ ಮಳೆಗಾಲಕ್ಕೆ ಸಜ್ಜಾಗಿದೆ. ರಬ್ಬರ್ ಬೋಟ್, ಆಸ್ಕಲೈಟ್, ಮರ ಕತ್ತರಿಸುವ ಯಂತ್ರ, ಲೈಫ್ ಜಾಕೆಟ್‍ನೊಂದಿಗೆ ತಂಡ ಸಿದ್ಧತೆಯನ್ನು ಮಾಡಿಕೊಂಡಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಈ ಬಾರಿಯೂ ಗೃಹರಕ್ಷಕದಳದ ಪ್ರವಾಹ ರಕ್ಷಣಾ ತಂಡವನ್ನು ಜಿಲ್ಲಾ ಕಮಾಡೆಂಟ್ ಡಾ||ಮುರಳೀ ಮೋಹನ್ ಚೂಂತಾರುರವರ ಸೂಚನೆಯಂತೆ ಉಪ್ಪಿನಂಗಡಿಯಲ್ಲಿ ರಚಿಸಿಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಬ್ಬರು ಈಜುಗಾರರು, ಒರ್ವ ಎಲೆಕ್ಟ್ರೀಶಿಯನ್, ಒಳಗೊಂಡ ಐದು ಸದಸ್ಯರ ಪ್ರವಾಹ ರಕ್ಷಣಾ ತಂಡ ಇದಾಗಿದೆ. ಜೂನ್ ತಿಂಗಳ ಆರಂಭದಿಂದ ಅಗೋಸ್ಟ್ ತಿಂಗಳಾಂತ್ಯದವರೆಗೆ ಈ ತಂಡ ಕಾರ್ಯ ನಿರ್ವಹಿಸಲಿದೆ. ಗೃಹರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ದಿನೇಶ್, ಬಿ.ಜನಾರ್ದನ ಆಚಾರ್ಯ, ವಸಂತ.ಕೆ, ಅಣ್ಣು. ಬಿ,ಸಮದ್, ತಂಡದಲ್ಲಿದ್ದಾರೆ. ಸಾರ್ವಜನಿಕರ ಪ್ರಾಣ, ಆಸ್ತಿಪಾಸ್ತಿ, ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಪುತ್ತೂರು ತಹಶೀಲ್ದಾರ್ ಹಾಗೂ ಉಪ್ಪಿನಂಗಡಿ ಉಪತಹಶೀಲ್ದಾರ್ ರವರ ಅಧೀನದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು