Saturday, November 23, 2024
ಸುದ್ದಿ

ಕೊಡಗಿನಲ್ಲಿ ಲಘು ವಾಹನಗಳಿಗೆ ಹೆದ್ದಾರಿ ಸಂಚಾರ ಮುಕ್ತ : ಘನ ವಾಹನಗಳಿಗೆ ಸಂಚಾರ ನಿಷೇಧ – ಕಹಳೆ ನ್ಯೂಸ್

ಮಡಿಕೇರಿ: ಕಳೆದ ವರ್ಷದ ಮಳೆಯ ಅವಾಂತರಕ್ಕೆ ಕೊಡಗು ತತ್ತರಿಸಿ ಹೋಗಿತ್ತು. ಈ ನಡುವೆ ವಾಹವ ಸಂಚಾರಕ್ಕಾಗಿ ರಸ್ತೆಗಳನ್ನು ಸರಿಪಡಿಸಲಾಗಿತ್ತು, ಆದರೆ, ಅಧಿಕ ಭಾರ ಹೊತ್ತ ಲಾರಿಗಳು, ಶಿಪ್ಪಿಂಗ್ ಕಾರ್ಗೋ, ಮಲ್ಟಿ ಆಕ್ಸಿಲ್, ಲಾಂಗ್ ಚಾಸೀಸ್ ಮತ್ತು ಬುಲ್ಲೆಟ್ ಟ್ಯಾಂಕರ್ ಗಳ ಸಂಚಾರವನ್ನು ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ನಿಷೇಧಿಸುವಂತೆ ಕೊಡಗು ಜಿಲ್ಲಾಧಿಕಾರಿ ಅನೇಸ್ ಕಣ್ಮನಿ ಆದೇಶ ಹೊರಡಿಸಿದ್ದಾರೆ.

ಅಡುಗೆ ಅನಿಲ, ಪೆಟ್ರೋಲ್ ಉತ್ಪನ್ನ, ಪಡಿತರ ಹಾಗೂ ತುರ್ತು ಸೇವೆಗಳನ್ನು ಒದಗಿಸುವ ವಾಹನಗಳಿಗೆ ಹೆದ್ದಾರಿ ಸಂಚಾರ ಮುಕ್ತವಾಗಿರಲಿದೆ. ಹೆದ್ದಾರಿ ಕುಸಿದಿರುವ ಸ್ಥಳದಲ್ಲಿ ತಾತ್ಕಾಲಿಕ ದುರಸ್ಥಿ ಮಾಡಲಾಗಿದ್ದು, ಬೃಹತ್ ಟಾರ್ಪಲ್ ಹೊಂದಿಸಿ ಭೂಕುಸಿದ ಸ್ಥಳಕ್ಕೆ ನೀರು ಹರಿಯದಂತೆ ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಗರದ ಜನರಲ್ ತಿಮ್ಮಯ್ಯ ವೃತ್ತದಿಂದ 1. ಕಿ.ಮೀ. ದೂರದಲ್ಲಿ ಹೆದ್ದಾರಿ ಕುಸಿತ ಗೊಂಡ ಪರಿಣಾಮ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು. ಆದರೆ ಮಡಿಕೇರಿ- ಮೇಕೇರಿ-ತಾಳತ್ತಮನೆ ಬೈಪಾಸ್ ರಸ್ತೆ ತೀರಾ ಕಿರಿದಾಗಿದ್ದು, ಲಾರಿ, ಬಸ್‍ಗಳು, ಕ್ಲಬ್ ಕ್ಲಾಸ್ ಹವಾನಿಯಂತ್ರಿತ ಬಸ್‍ಗಳ ಸಂಚಾರ ಈ ಬದಲಿ ರಸ್ತೆಯಲ್ಲಿ ಅಸಾಧ್ಯವಾದ ಕಾರಣ ಮಂಗಳೂರು ರಸ್ತೆಯಲ್ಲಿ ಲಘು ಮತ್ತು ಪ್ರಯಾಣಿಕರ ವಾಹನಗಳ ಸಂಚಾರಕ್ಕೆ ಮರು ಅವಕಾಶ ಕಲ್ಪಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾಗಮಂಡಲ-ಅಯ್ಯಂಗೇರಿ ಸಂಪರ್ಕ ರಸ್ತೆ ಮುಳುಗಿದ ಸ್ಥಿತಿಯಲ್ಲಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ನಾಪೋಕ್ಲು-ಬೊಳಿಬಾಣೆ ಸಂಪರ್ಕ ಸೇತುವೆ ಕಾವೇರಿ ನದಿ ಪ್ರವಾಹಕ್ಕೆ ಮುಳುಗಡೆಯಾಗಿದೆ. ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆ ಯಾಗಿದ್ದು, ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಂಚಾರ ಸ್ಥಗಿತಗೊಂಡಿದೆ. ಮಕ್ಕಂದೂರು ಬಳಿ ಕೃಷಿ ಗದ್ದೆಗಳಿಗೆ ತೋಡು ನೀರು ನುಗ್ಗಿ ಸಸಿ ಮಡಿ ನಾಶವಾಗಿದೆ.