Monday, January 20, 2025
ಸುದ್ದಿ

ಪುತ್ತೂರಿನ ನವೀಕೃತ ದುಗ್ಗಮ್ಮ-ದೇರಣ್ಣ ಸಭಾಭವನ ಲೋಕಾರ್ಪಣೆ- ಕಹಳೆ ನ್ಯೂಸ್

ಪುತ್ತೂರು : 2003ರಲ್ಲಿ ಪುತ್ತೂರಿನ ದರ್ಬೆ-ಬೈಪಾಸ್ ಸರ್ಕಲ್ ಬಳಿ ಸ್ಥಾಪಿತವಾದ ಬೆಳ್ಳಾರೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಭವನ ಇದೀಗ ಸಾರ್ವಜನಿಕರ ಅಪೇಕ್ಷೆ ಮೇರೆಗೆ ಸಂಪೂರ್ಣ ಹವಾನಿಯಂತ್ರಿತದೊಂದಿಗೆ ಇಂದು ಲೋಕಾರ್ಪಣೆಗೊಂಡಿದೆ.
ಅಂದು ಕವಿ-ಸಾಹಿತಿ ಕಯ್ಯಾರ ಕಿಂಞಣ್ಣ ರೈಗಳಿಂದ ಉದ್ಘಾಟನೆಗೊಂಡ ಈ ಸಬಾಭವನ ಸಾವಿರಕ್ಕೂ ಮಿಕ್ಕಿ ಆಸನಗಳನ್ನು ಒಳಗೊಂಡು, ಪ್ರತ್ಯೇಕ ವಿಸ್ತಾರವಾದ ಭೋಜನ ಶಾಲೆಯನ್ನು ಹೊಂದಿದೆ. ಪುತ್ತೂರು ಪೇಟೆಯಿಂದ ಅನತಿ ದೂರದಲ್ಲಿರುವ ಈ ಸಭಾಭವನ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಉದ್ಘಾಟನೆಗೊಂಡ ನವೀಕೃತ ಸಭಾಭವನಕ್ಕೆ ಈಗಾಗಲೇ ಬುಕ್ಕಿಂಗ್ ಆರಂಭಗೊಂಡಿದೆ. ಇನ್ನು ಇಂದಿನ ಉದ್ಘಾಟನಾ ಸಮಾರಂಭದಲ್ಲಿ ಬಿ. ಸಂಜೀವ ಶೆಟ್ಟಿ, ವೇದ.ಎಸ್.ಶೆಟ್ಟಿ, ದೀಪಕ್ ಶೆಟ್ಟಿ, ಡಾ. ಚೇತಕ್ ಶೆಟ್ಟಿ, ಜಗಜೀವನ್‍ದಾಸ್ ರೈ, ಭಗವಾನ್ ರೈ, ಗೋಪಿನಾಥ್, ಸುರೇಂದ್ರ ಆಚಾರ್ಯ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು