Sunday, January 19, 2025
ಸುದ್ದಿ

ಇಳಂತಿಲ ಸಮೀಪ ಮೊಗ್ರುನಲ್ಲಿ ಶಂಕರ ಭಟ್ ರವರ ಮೇಲೆ ಹಲ್ಲೆ | ವ್ಯಾಪಕ ಖಂಡನೆ – ಕಹಳೆ ನ್ಯೂಸ್

 

ಮೊಗ್ರು-ಉಪ್ಪಿನಂಗಡಿ : ತನ್ನ ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಶ್ರೀಯುತ ಶಂಕರ ಭಟ್ ಇವರ ಮೇಲೆ ಹಿಂದಿನ ದ್ವೇಷದಿಂದ ಯೋಗೀಶ್ ಪೂಜಾರಿ ಕಡ್ತಿಲ ಹಾಗೂ ಆತನ ಮಗ ಸಂಯುಕ್ತ್ ಪೂಜಾರಿ ಕಡ್ತಿಲ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದು ಹಲ್ಲೆ ನಡೆಸಿದ್ದರು. ದಿನಾಂಕ ೨೨-೧೨-೨೦೧೭ ರಂದು ಎಂದಿನಂತೆ ಬೆಳಗ್ಗೆ ೦೭:೩೦ ರ ಸುಮಾರಿಗೆ ಬೈಕ್ ನಲ್ಲಿ ಮಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಶಂಕರ ಭಟ್ ರವರನ್ನು ಸಂಯುಕ್ತ್ ಪೂಜಾರಿ ಸರಳಿ ಎಂಬಲ್ಲಿ ತಡೆದು ನಿಲ್ಲಿಸಿ, ಮರದ ಬ್ಯಾಟ್ ನಿಂದ ಹೊಡೆದಿದ್ದು, ಇದಕ್ಕೆ ಆತನ ತಂದೆಯಾದ ಯೋಗೀಶ್ ಪೂಜಾರಿ ಸನಿಹದಲ್ಲೇ ನಿಂತು ಮಗನ ಈ ಪೈಶಾಚಿಕ ಕೃತ್ಯಕ್ಕೆ ಪ್ರೋತ್ಸಾಹ ನೀಡಿರುತ್ತಾರೆ. ಈ ಹಿಂದೆ ಮೊಗ್ರು ಗ್ರಾಮದಲ್ಲಿ ಯೋಗೀಶ್ ಪೂಜಾರಿ ಅವರು ಅಕ್ರಮವಾಗಿ ನಡೆಸುತ್ತಿದ್ದ ಕಲ್ಲಿನಕೋರೆಯ ಬಗ್ಗೆ ಶಂಕರ ಭಟ್ ರವರು ಪ್ರಶ್ನಿಸಿ, ದೂರು ನೀಡಿದ್ದರು. ಇದರಿಂದಾಗಿ ಕಲ್ಲಿನಕೋರೆಯ ಮೇಲೆ ಲೋಕಾಯುಕ್ತ ಧಾಳಿ ನಡೆದಿದ್ದು, ಕೋರೆಯನ್ನು ಸ್ಥಗಿತಗೊಳಿಸಿ, ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿತ್ತು. ತಪ್ಪಿನ ನಂತರವೂ ಬುದ್ಧಿ ಕಲಿಯದ ಯೋಗೀಶ್ ಪೂಜಾರಿ ಅವರು ಹಳೆಯ ದ್ವೇಷವನ್ನೇ ಮುಂದಿಟ್ಟುಕೊಂಡು ತನ್ನ ಮಗನ ಮೂಲಕ ಹಲ್ಲೆ ನಡೆಸಿರುತ್ತಾರೆ. ಮಾತ್ರವಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆಯನ್ನೊಡ್ಡಿರುತ್ತಾರೆ. ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಾ, ಸದಾ ಇತರರ ಒಳಿತನ್ನು ಮಾತ್ರ ಬಯಸುವ ಶಂಕರ ಭಟ್ ರವರಿಗೆ ಇಂತಹ ದುಃಸ್ಥಿತಿ ಬಂದಿರುವುದು ಖಂಡನೀಯ. ಇದನ್ನು ಉರುವಾಲು ವಲಯದ ಹವ್ಯಕ ಸಮಾಜ ತೀವ್ರವಾಗಿ ಖಂಡಿಸುತ್ತಿದೆ. ಸಮಾಜದಲ್ಲಿ ಒಳ್ಳೆಯ ತನದಿಂದ ಬದುಕುವವರು ತಲೆ ಎತ್ತಿ ನಡೆಯದಂತೆ ಮಾಡುವ ಇಂತಹ ಹುಳಗಳನ್ನು ಆರಂಭದಲ್ಲಿಯೇ ಚಿವುಟಿ ಹಾಕಬೇಕು. ಈ ಪರಿಸ್ಥಿತಿ ಇನ್ಯಾರಿಗೂ ಬರಬಾರದು ಎಂಬ ಸಾಮಾಜಿಕ ಕಳಕಳಿಯೊಂದಿಗೆ ಉರುವಾಲು ವಲಯ ಹವ್ಯಕ ಸಮಾಜದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸರ್ವಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

Leave a Response