Monday, January 20, 2025
ಸಿನಿಮಾಸುದ್ದಿ

‘ಗಂಡುಗಲಿ ಮದಕರಿ ನಾಯಕ’ನಾಗಲು ದರ್ಶನ್ ತಯಾರಿ- ಕಹಳೆ ನ್ಯೂಸ್

ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಗಂಡುಗಲಿ ಮದಕರಿ ನಾಯಕ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿದ್ದಾರೆ, ಆಗಸ್ಟ್ ತಿಂಗಳಿನಲ್ಲಿ ಸಿನಿಮಾ ಶೂಟಿಂಗ್ ಆರಂಭಿಸಲು ನಿರ್ಧರಿಸಲಾಗಿದೆ,
ಐತಿಹಾಸಿಕ ಸಿನಿಮಾವನ್ನು ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸುತ್ತಿದ್ದಾರೆ, ಐತಿಹಾಸಿಕ ಸಿನಿಮಾಗಾಗಿ ಹೆಚ್ಚಿನ ಸಮಯ ಬೇಕಾಗುತ್ತದೆ ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಸದ್ಯ ಗ್ರಾಫಿಕ್ಸ್ ವಿನ್ಯಾಸ ಮಾಡಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಐತಿಹಾಸಿಕ ಸಿನಿಮಾಗಾಗಿ ವಸ್ತ್ರ ವಿನ್ಯಾಸಕ್ಕಾಗಿ ಹೆಚ್ಚಿನ ಸಮಯ ಹಿಡಿಯುತ್ತಿದೆ. ಎಲ್ಲಾ ವಿಭಾಗಗಳಲ್ಲೂ ಕೆಲಸ ನಡೆಯುತ್ತಿದೆ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಈ ಹಿಂದೆ ಸಂದರ್ಶನವೊಂದರಲ್ಲಿ ಗಂಡುಗಲಿ ಮದಕರಿ ನಾಯಕ ಸಿನಿಮಾ ಕನ್ನಡ ಸಿನಿಮಾ ಇತಿಹಾಸದಲ್ಲಿ ಲ್ಯಾಂಡ್ ಮಾರ್ಕ್ ಆಗಲಿದೆ ಎಂದು ರಾಕ್ ಲೈನ್ ಹೇಳಿದ್ದರು.
ಸಿನಿಮಾಗೆ ಹಂಸಲೇಖಾ ಸಂಗೀತ ನೀಡುತ್ತಿದ್ದಾರೆ.ಐತಿಹಾಸಿಕ ಸಿನಿಮಾವನ್ನು ಚಿತ್ರದುರ್ಗ, ಮುಂಬಯಿ, ಹೈದರಾಬಾದ್ ಹಾಗೂ ರಾಜಸ್ತಾನಗಳಲ್ಲಿ ಶೂಟಿಂಗ್ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು