Sunday, January 19, 2025
ಸುದ್ದಿ

ನಾನು ಮದುವೆಯಾಗುವ ಹುಡುಗ ರೈತನಾಗಿರಬೇಕು! – ಶುಭಪೂಂಜ ಕಂಡೀಷನ್

 

ಸಿನಿ ಕಹಳೆ : ನಾವೆಲ್ಲ ಕಂಡಿರುವಂತೆ ಸಿನಿಮಾ ನಟಿಯರು ಹೆಚ್ಚಾಗಿ ಸಹ ನಟರನ್ನೊ, ದೊಡ್ಡ ಉದ್ಯಮಿಯನ್ನೊ ಮದುವೆಯಾಗುತ್ತಾರೆ, ಹಣ ಅಂತಸ್ತು ಮತ್ತು ಸೌಂದರ್ಯವನ್ನು ಮೊದಲ ಮಾನದಂಡವಾಗಿ ಪರಿಗಣಿಸುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ನಮ್ಮ ಸ್ಯಾಂಡಲ್ ವುಡ್ ನಟಿ ಶುಭಾ ಪೂಂಜಾ ತಾನು ಮದುವೆ ಆಗುವ ಹುಡುಗ ರೈತನಾಗಿದ್ದರೆ ಬಹಳ ಒಳ್ಳೆಯದು, ಅಂತಹ ಹುಡುಗನಿಗೆ ಪ್ರಾಶಸ್ತ್ಯ ನೀಡುತ್ತೇನೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾನು ಮದುವೆಯಾಗಲು ಇಚ್ಛಿಸುವ ಯುವಕನಲ್ಲಿರಬೇಕಾದ ಕ್ವಾಲಿಟಿಗಳೇನು ಎಂಬುದನ್ನು ಪಟ್ಟಿ ಮಾಡಿದ ಅವರು, ಹುಡುಗ ಪ್ರಾಣಿಗಳನ್ನು ಪ್ರೀತಿಸಬೇಕು, ಹಳ್ಳಿ ಜೀವನಕ್ಕೆ ಸಿದ್ಧನಾಗಿರಬೇಕು, ಮಹತ್ವಾಕಾಂಕ್ಷೆಗಳು ಇರಬಾರದು, ಕಪ್ಪು ಬಣ್ಣ ಇಷ್ಟ, ಒಳ್ಳೆ ಮನುಷ್ಯನಾಗಿರಬೇಕು ಎಂಬ ಬೇಡಿಕೆಗಳಿವೆ ಎಂದರು. ಇದು ಕೇವಲ ಸುದ್ದಿಯಾಗಲು ಕೊಟ್ಟ ತಮಾಷೆಯ ಹೇಳಿಕೆಯೇ ಅಥವಾ ನಿಜವಾಗಿಯೂ ಇಷ್ಟು ಸರಳ ರೀತಿಯಾಗಿ ಬಾಳ ಸಂಗಾತಿಯ ಕನಸು ಕಾಣುತ್ತಿದ್ದಾರೋ ಕಾದು ನೋಡಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response