ಕಡಬದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‍ನ ಕಡಬ ಘಟಕದಲ್ಲಿ ಪದಗ್ರಹಣ ಮತ್ತು ಕವಿಗೋಷ್ಠಿ ನಡೆಯಿತು.
ವೇದ, ಉಪನಿಷತ್ತು, ರಾಮಾಯಣ ಮಹಾಭಾರತದಂತಹ ಕಾವ್ಯಗಳಲ್ಲೂ ಚುಟುಕು ಸಾಹಿತ್ಯವಿದೆ. ಸ್ವಾತಂತ್ರ್ಯ ಹೋರಾಟದಂತಹ ಚಳುವಳಿಯಲ್ಲೂ ಚುಟುಕು ಸಾಹಿತ್ಯವಿತ್ತು. ಚುಟುಕು ಎನ್ನುವುದು ಮನುಷ್ಯ ಜೀವನಕ್ಕೆ ಹತ್ತಿರವಾದುದು. ಕೆಲವೇ ಶಬ್ಧಗಳಲ್ಲಿ ವಿಶಾಲಾರ್ಥ ನೀಡುವ ಸಾಹಿತ್ಯ ಶೈಲಿಯೇ ಚುಟುಕು ಎಂದು ಎಂದು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‍ನ ಗೌರವಾಧ್ಯಕ್ಷ ಇರಾ ನೇಮು ತಿಳಿಸಿದರು.
ಪದಗ್ರಹಣ ಸಮಾರಂಭ ಬಳಿಕ ಹಿರಿಯ ಪತ್ರಕರ್ತ ಪ್ರೊ.ಪಿ.ಬಿ. ಅರ್ತಿಕಜೆ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ನಾರಾಯಣ ರೈ ಕುಕ್ಕುವಳ್ಳಿ, ತಾರನಾಥ ಬೋಳಾರ್, ಜಯಾನಂದ ಪೆರಾಜೆ, ಶಾಂತಾ ಪುತ್ತೂರು ಉಪಸ್ಥಿತರಿದ್ದರು.