Monday, January 20, 2025
ಸುದ್ದಿ

ಮಹಿಳಾ ಸಹಕಾರಿ ಸಂಘದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪುಂಡಾಟಿಕೆ ಮೆರೆದ ಪುಢಾರಿಗಳಿಗೆ ಗ್ರಾಮಸ್ಥರ ಖಂಡನೆ – ಕಹಳೆ ನ್ಯೂಸ್

ಬಂದಾರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾಮಾಜಿಕ ಜಾಲತಾಣವೊಂದರಲ್ಲಿ ಹರಿದಾಡಿದ ವಾಟ್ಸ್ ಆ್ಯಪ್ ಸಂದೇಶವೊಂದು ಗ್ರಾಮಸ್ಥರಲ್ಲಿ ಗೊಂದಲವುಂಟುಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ದಿನಾಂಕ 7/06/2019 ರಂದು ಬಂದಾರು ಗ್ರಾಮ ಪಂಚಾಯಿತ್ ಅಧ್ಯಕ್ಷರು, ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಗೆ ದೂರವಾಣಿ ಕರೆಯೊಂದನ್ನು ಮಾಡಿದ್ದು, ಆ ಮುಖಾಂತರ ಸಂಘದ ವಠಾರದ ಮತ್ತು ಮೇಲ್ಛಾವಣಿಯ ನೀರು (ಪಾತ್ರೆ ತೊಳೆಯುವ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇದೆ) ಮಣ್ಣಿನ ರಸ್ತೆಯ ಮುಖಾಂತರ ಮೋರಿಗೆ ಸೇರುತ್ತಿದ್ದು, ಈ ಬಗ್ಗೆ ಇನ್ನೊಂದು ಮೋರಿ ಅಳವಡಿಸುವ ಬಗ್ಗೆ ಚರ್ಚಿಸಿರುತ್ತಾರೆ. ಈ ಬಗ್ಗೆ ಕಾರ್ಯಪ್ರವೃತ್ತವಾದ ಸಂಘವು ದಿನಾಂಕ 10/06/2019ರಂದು ಕಾರ್ಯಕಾರಿ ಸಮಿತಿಯ ಮೀಟಿಂಗ್ ನಡೆಸಿದ್ದು ಗ್ರಾಮ ಪಂಚಾಯತಿ ವಾರ್ಡ್ ಸದಸ್ಯ ದಿನೇಶ್ ಖಂಡಿಗ ಅವರೊಂದಿಗೆ ಚರ್ಚಿಸಿ ಎರಡು ಮೋರಿಯನ್ನು ಸಂಘದ ವತಿಯಿಂದ ನೀಡುವುದಾಗಿಯೂ ಹಾಗು ಈ ಬಗ್ಗೆ ಕಾಮಗಾರಿಯ ವೆಚ್ಚವನ್ನು ವಾರ್ಡ್ ಸದಸ್ಯನ ಅನುದಾನದಿಂದ ನೀಡುವುದಾಗಿಯೂ ನಿರ್ಣಯಿಸಲಾಗಿದ್ದು, ಈ ನಿಟ್ಟಿನಲ್ಲಿ ಸಂಘವು ಕಾರ್ಯಪ್ರವೃತವಾಗಿತ್ತು.

ಆದರೆ ದಿನಾಂಕ 12/06/2019ರಂದು ಈ ಮುಂದಿನ ವಾಟ್ಸ್‍ಆ್ಯಪ್ ಸಂದೇಶ ಹರಿದಾಡಿತ್ತು.
ಸಾಮಾಜಿಕ ಜಾಲತಾಣದಲ್ಲಿ ಒಬ್ಬ ಬಿಟ್ಟಿ ಪ್ರಚಾರಗಿಟ್ಟಸುವ ಘಟನೆಯೊಂದು ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸುವ ಈ ಅವಿವೇಕಿ, ಅಲ್ಪಜ್ಞಾನಿಗೆ. ಮಹಿಳಾ ಸಹಕಾರಿ ಸಂಘವು ಈ ಹಿಂದೆಯೇ ಸೂಕ್ತ ನಿರ್ಣಯ ಕೈಗೊಂಡಿದೆ ಎಂಬ ಸೂಕ್ತ ಮಾಹಿತಿ ಇಲ್ಲದೆ. ಸಂಘದ ಸದಸ್ಯರ ಮತ್ತು ಗ್ರಾಮಸ್ಥರ ನಗೆಪಾಟಲಿಗೀಡಾಗಿದೆ.

ಈ ಬಗ್ಗೆ ಸಹಕಾರಿ ಸಂಘದ ಅಧ್ಯಕ್ಷರು, ಗ್ರೂಪ್ ಅಡ್ಮಿನ್ ಹಾಗು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿರುವ ಉದಯ್ ಬಿ.ಕೆಯವರಿಗೆ ಕರೆ ನೀಡಿ ಸ್ಪಷ್ಠೀಕರಣ ನೀಡಬೇಕೆಂದು ಕೇಳಿಕೊಂಡಾಗ ‘ನೀವು ಪೊಲೀಸ್ ಕಂಪ್ಲೇಂಟ್ ಕೊಡಿ ಅಥವಾ ಮಹಿಳಾ ಆಯೋಗಕ್ಕೆ ದೂರು ನೀಡಿ ಮತ್ತು ನಿಮ್ಮಿಂದ ಏನು ಮಾಡಲು ಸಾಧ್ಯ ಎಂಬ? ಉಢಾಫೆಯ ಹಾರಿಕೆಯ ಮಾತನ್ನಾಡಿದ್ದಾರೆ.

ಸುಮಾರು 400 ಮಹಿಳಾ ಸದಸ್ಯರನ್ನು ಒಳಗೊಂಡ, ಮಂಗಳೂರು ಒಕ್ಕೂಟದಲ್ಲಿಯೇ ಅತ್ಯುತ್ತಮ ಮಹಿಳಾ ಸಹಕಾರಿ ಸಂಘವೆಂಬ ಪ್ರಶಸ್ತಿಗೆ ಪಾತ್ರವಾದ ಮಹಿಳಾ ಸಹಕಾರಿ ಸಂಘವು, ಸಂಬಂಧಪಟ್ಟ ಇಲಾಖೆ ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಹಕಾರಿ ಸಂಘದ ಕಾನೂನಿನಂತೆ ಕಾರ್ಯಪ್ರವೃತ್ತರಾಗಿದ್ದರೂ, ಹರಿಯುವ ನೀರಿನಲ್ಲಿ ಕಡ್ಡಿ ಅಲ್ಲಾಡಿಸುವ ವಿಕೃತ ಮನೋಪ್ರವೃತ್ತಿ ಹೊಂದಿರುವ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಜ್ಞಾನ ಇಲ್ಲದೆ ಇಂತಹ ಸಂದೇಶವೊಂದು ಕಳುಹಿಸಿರುವುದು, ಸಂಘದ ಮಹಿಳಾ ಸದಸ್ಯರು ಮತ್ತು ಗ್ರಾಮಸ್ಥರಲಿ ಆಕ್ರೋಶಕ್ಕೆ ಗುರಿಯಾಗಿದ್ದು, ಸಂಬಂಧಪಟ್ಟ ವ್ಯಕ್ತಿಯು ಕ್ಷಮೆಯನ್ನು ಕೋರಬೇಕು, ಇಲ್ಲವಾದಲ್ಲಿ ಮುಂದಿನ ತೀವ್ರ ಹೋರಾಟ ಮಾಡುವುದಾಗಿ ಆಗ್ರಹಿಸಿದ್ದಾರೆ.