ರಾಧಿಕಾ ಪಂಡಿತ್ ಮದುವೆ ಬಳಿಕ ‘ಆದಿ ಲಕ್ಷ್ಮೀ ಪುರಾಣ’ ಎಂಬ ಸಿನಿಮಾ ಮೂಲಕ ಮತ್ತೆ ಬೆಳ್ಳಿತರೆಗೆ ಕಂಬ್ಯಾಕ್ ಮಡುತ್ತಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರವನ್ನು ಪ್ರಿಯಾ ವಿ ನಿರ್ದೇಶಿಸಿದ್ದಾರೆ. ಮಣಿರತ್ನಂ ಅವರ ಜೊತೆ ಹಲವು ಸಿನಿಮಾಗಳಿಗೆ ಕೆಲಸ ಮಾಡಿದ ಅನುಭವವಿರುವ ಪ್ರಿಯಾ ನಿರ್ದೇಶನದ ಮೊದಲ ಕನ್ನಡ ಸಿನಿಮಾವಿದು.
ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ಜೂನ್ 21 ರಂದು ಚಿತ್ರದ ಆಡಿಯೋ ಬಿಡುಗಡೆ ನಡೆಯಲಿದೆ. ಈ ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ ನಾಯಕರಾಗಿ ನಟಿಸಿದ್ದಾರೆ.
ಸದ್ದುಗದ್ದಲವಿಲ್ಲದೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರದಲ್ಲಿ ಹೊಸ ರೀತಿಯ ರಾಧಿಕಾ ಪಂಡಿತ್ ಅವರನ್ನು ನೋಡಬಹುದು. ಅದೇ ರೀತಿ ನಿರೂಪ್ ಭಂಡಾರಿಯವರ ಪಾತ್ರ ಕೂಡಾ ಭಿನ್ನವಾಗಿದೆ ಎಂಬುದು ನಿರ್ದೇಶಕಿ ಪ್ರಿಯಾ ಅವರ ಮಾತು.