ಆಲಂಕಾರು: ಪೆರಾಬೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಲಂಕಾರು ಶಾಲೆಯ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ನೋಟ್‍ಬುಕ್, ಬ್ಯಾಗ್, ಲೇಖನ ಸಾಮಾಗ್ರಿಗಳನ್ನು ಉಚಿತವಾಗಿ ನೀಡಲಾಯಿತು.
ಈ ವೇಳೆ ಶಾಲೆಯ ಮುಖ್ಯಗುರು ನಿಂಗರಾಜ ಕೆ ಪಿ ಹಾಗೂ ಶಿಕ್ಷಕವೃಂದ, ಪೋಷಕರು, ಸ್ಪೋರ್ಟ್ಸ್ ಕ್ಲಬ್‍ನ ಅಧ್ಯಕ್ಷ ರೂಪೇಶ್ ರೈ ಮರುವಂತಿಲ, ಸದಸ್ಯರಾದ ಯೋಗೀಶ, ಅಭಿಷೇಕ್, ಜೊತೆ ಕಾರ್ಯದರ್ಶಿ ಅವಿನಾಶ್ ರೈ, ಫಯಾಜ್ ಕುಂತೂರು ಮುಂತಾದವರು ಉಪಸ್ಥಿತರಿದ್ದರು.