ಪೆರಾಬೆ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪೆರಾಬೆ ಶಾಲೆಯ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ನೋಟ್‍ಬುಕ್, ಬ್ಯಾಗ್, ಲೇಖನ ಸಾಮಾಗ್ರಿಗಳನ್ನು ಉಚಿತವಾಗಿ ನೀಡಲಾಯಿತು.
ಈ ವೇಳೆ ಶಾಲೆಯ ಪ್ರಭಾರ ಮುಖ್ಯಗುರು ಹೇಮಲತಾ ಹಾಗೂ ಶಿಕ್ಷಕವೃಂದ, ಸ್ಪೋರ್ಟ್ಸ್ ಕ್ಲಬ್‍ನ ಫಯಾಜ್ ಕುಂತೂರು, ಯೋಗೀಶ ಗೌಡ, ರಂಜಿತ್ ಗೌಡ, ರಾಕೇಶ್ ಗೌಡ, ಅಭಿಶೇಕ್ ಪಾಟಾಳಿ, ಶರತ್ ಗೌಡ, ಪುರುಷೋತ್ತಮ ಗೌಡ, ಶಾಲಾ ಶಿಕ್ಷಕಿ ಹೊನ್ನಮ್ಮ, ಸಾಹಿನಾ, ಸುಪ್ರೀತಾ ಉಪಸ್ಥಿತರಿದ್ದರು.