ಕಡಬ: ಕೆ.ಎಸ್.ಆರ್.ಟಿ.ಎಸ್ ಬಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಈ ದಾರುಣ ಘಟನೆ ಉಪ್ಪಿನಂಗಡಿ ಮತ್ತು ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯದಲ್ಲಿ ಸಂಭವಿಸಿದೆ.
ಮೃತ ಸವಾರನನ್ನು ಬಲ್ಯ ಮದ್ರಾಡಿ ನಿವಾಸಿ ರಾಮಚಂದ್ರ ಗೌಡ ಎಂಬವರ ಪುತ್ರ ಮೋಕ್ಷಿತ್(21) ಎಂದು ಗುರುತಿಸಲಾಗಿದೆ.
ಮೋಕ್ಷಿತ್ ತನ್ನ ಪಲ್ಸರ್ ಬೈಕಿನಲ್ಲಿ ಬಲ್ಯದಿಂದ ಕಡಬಕ್ಕೆ ತೆರಳುತ್ತಿದ್ದಾಗ ಕೆ.ಎಸ್.ಆರ್.ಟಿ.ಎಸ್ ಬಸ್ ನಡುವೆ ಢಿಕ್ಕಿಯುಂಟಾಗಿ ಈ ದುರ್ಘಟನೆ ಸಂಭವಿಸಿದೆ. ಮೃತದೇಹವನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಇರಿಸಲಾಗಿದೆ.