Monday, January 20, 2025
ಸಿನಿಮಾಸುದ್ದಿ

ಮೈನವಿರೇಳಿಸುತ್ತಿದೆ ಪ್ರಭಾಸ್ ‘ಸಾಹೋ’ ಟೀಸರ್! – ಕಹಳೆ ನ್ಯೂಸ್

ರೆಬಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಬಹುಬಾಷಾ ಸಿನೆಮಾ ‘ಸಾಹೋ’ವಿನ ಒಫೀಷಿಯಲ್ ಟೀಸರ್ ರಿಲೀಸ್ ಅಗಿದ್ದು ಸಿನಿರಸಿಕರು ಟೀಸರ್ ನೋಡಿ ಬೆರಗಾಗಿದ್ದಾರೆ.

ನಿರೀಕ್ಷೆಗೆ ತಕ್ಕಂತೆ ಟೀಸರ್ ಅದ್ಭುತವಾಗಿ ಮೂಡಿ ಬಂದಿದೆ. ರೊಮ್ಯಾಂಟಿಕ್ ದೃಶ್ಯಗಳಿಂದ ಆರಂಭವಾಗುವ ಟೀಸರ್ ತದನಂತರ ಮಿಂಚಿನಂತೆ ಭರ್ಜರಿ ಆ್ಯಕ್ಷನ್ ಸನ್ನಿವೇಶಗಳ ಸರಮಾಲೆ ಶುರುವಾಗುತ್ತದೆ. ಪ್ರಭಾಸ್ ಬಾಹುಬಲಿ ನಂತರ ಈ ಚಿತ್ರಕ್ಕೆ ಯಾಕೆ ಇಷ್ಟೊಂದು ತಡ ಮಾಡಿದ್ರು ಅನ್ನೋ ಪ್ರಶ್ನೆಗೆ ಈ ಟೀಸರ್ ಉತ್ತರವಾಗಿದೆ. ನಾಯಕಿ ಶ್ರದ್ಧಾ ಕಪೂರ್‍ಗೂ ಇಲ್ಲಿ ಸಾಹಸ ದೃಶ್ಯಗಳನ್ನು ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಗಿಬ್ರನ್ ಅವರ ಹಿನ್ನಲೆ ಸಂಗೀತ ಸೊಗಸಾಗಿ ಮುಡಿ ಬಂದಿದೆ. ಅಲ್ಲದೆ ಇದೊಂದು ಮಲ್ಟಿ ಸ್ಟಾರರ್ ಚಿತ್ರವಾಗಿದ್ದು ಅರುಣ್ ವಿಜಯ್, ಜಾಕಿ ಶ್ರಾಪ್, ನೀಲ್‍ನಿತಿನ್ ಮುಖೇಶ್, ಲಾಲ್ ಹಾಗು ತೆಲುಗು ಚಿತ್ರರಂಗದ ಸ್ಟಾರ್ ಸಪೋರ್ಟಿಂಗ್ ನಟರು ಟೀಸರ್‍ನಲ್ಲಿ ಬಂದು ಹೋಗುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು