ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿನಯದ ಮೋಸ್ಟ್ ಎಕ್ಸ್‍ಪೆಕ್ಟೆಡ್ ಚಿತ್ರ ‘ರಾಬರ್ಟ್’ ಈಗಾಗಲೇ ಶೂಟಿಂಗ್ ಭರದಿಂದ ಸಾಗುತ್ತಿದೆ.
ಮೊನ್ನೆ ತಾನೆ ರಂಝಾನ್ ಹಬ್ಬದ ವಿಶೇಷವಾಗಿ ಥೀಮ್ ಪೋಸ್ಟರನ್ನು ಬಿಡುಗಡೆ ಮಾಡಿತ್ತು ಚಿತ್ರತಂಡ. ಆದರೆ ಅದರಲ್ಲಿ ದರ್ಶನ್ ಮುಖ ದರ್ಶನ ಆಗಿರಲಿಲ್ಲ ಇದೀಗ ಸದ್ದಿಲ್ಲದೆ, ರಾಬರ್ಟ್‍ನಲ್ಲಿ ದರ್ಶನ್ ಲುಕ್ ರಿವೀಲ್ ಆಗಿದೆ. ಜೊತೆಗೆ ವಿನೋದ್ ಪ್ರಭಾಕರ್ ಅವರು ಕೂಡ ರಾಬರ್ಟ್‍ನಲ್ಲಿ ನಟಿಸುತ್ತಿರುವುದು ಖಚಿತಗೊಂಡಿದೆ.
ಆದರೆ ಇದು ಒಫೀಷಿಯಲ್ ಆಗಿ ಚಿತ್ರತಂಡ ಹರಿಯಬಿಟ್ಟ ಸ್ಟಿಲ್ಲೋ ಅಥವಾ ಫೊಟೋ ಶೂಟ್ ವೇಳೆ ಲೀಕ್ ಆದ ಸ್ಟಿಲ್ಲೋ ಎಂದು ತಿಳಿದು ಬಂದಿಲ್ಲ.
ಭಾರವಿ ಫಿಲ್ಮ್ ಬ್ಯೂರೋ, ಕಹಳೆ ನ್ಯೂಸ್