ಉಪ್ಪಿನಂಗಡಿ : ತೇಜಾಕುಮಾರಿ ( 18 ) ವರ್ಷ ಎಂಬವಳು ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ಕುಂಟಿನಿ ಎಂಬಲ್ಲಿ ಚನ್ನಪ್ಪ ಸಪಲ್ಯರವರ ಗುಡ್ಡೆ ಸ್ಥಳದ ಗೇರು ಬೀಜದ ಮರಕ್ಕೆ ತನ್ನ ಚೂಡಿದಾರದ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಮೃತಪಟ್ಟಿರುವುದಾಗಿದೆ ವರದಿಯಾಗಿದೆ.
ಕಾರಣ ಹಾಲನ್ನು ಪೆರಿಯಡ್ಕದ ಹಾಲಿನ ಡೈರಿಗೆ ಕೊಟ್ಟು ನಂತರ ಕಾಲೇಜಿಗೆ ಹೋಗಲು ತಂದೆ ಮೋನಪ್ಪ ಗೌಡರು ಮನೆಯಲ್ಲಿ ಜೋರು ಮಾಡಿದ್ದಕ್ಕೆ ಹಾಲನ್ನು ಡೈರಿಗೆ ಕೊಟ್ಟು ಈ ದಿನ ಬೆಳಿಗ್ಗೆ 8.30 ಗಂಟೆಯಿಂದ ಮದ್ಯಾಹ್ನ 2.00 ಗಂಟೆಯ ಮದ್ಯಾವದಿಯಲ್ಲಿ ವಾಪಾಸು ಮನೆಗೆ ಹೋಗುವ ದಾರಿ ಬದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುತ್ತಾಳೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಪ್ರಕರಣ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿದೆ.