ಇಂಗ್ಲೆಂಡ್ನಲ್ಲಿ ಸುರಿಯುತ್ತಿರುವ ಮಳೆ, ಕ್ರಿಕೆಟ್ ಅಭಿಮಾನಿಗಳಿಗೆ ತೀವ್ರ ಬೇಸರ ಮೂಡಿಸಿದ್ದು, ಗುರುವಾರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನಡೆಯಬೇಕಿದ್ದ ಟೀಂ ಇಂಡಿಯಾ-ನ್ಯೂಜಿಲೆಂಡ್ ನಡುವಣ ಪಂದ್ಯ ಮಳೆಯಿಂದ ರದ್ದಾಗಿದೆ.
ಈ ಟೂರ್ನಿಯಲ್ಲಿ ಮಳೆಯಿಂದ ರದ್ದಾದ ನಾಲ್ಕನೇ ಪಂದ್ಯ ಎಂಬ ತೆಗಳಿಕೆಗೆ ಗುರಿಯಾಗಿದೆ. ಬಿಟ್ಟು ಬಿಡದೆ ಸುರಿದ ಮಳೆಯಿಂದ ಟಾಸ್ ಸಹ ನಡೆಯದಂತಾಯಿತು. ಪರಿಣಾಮ ಹಲವು ಗಂಟೆಗಳ ಕಾಯ್ದ ಬಳಿಕ ಪಂದ್ಯವನ್ನು ರದ್ದು ಎಂದು ಘೋಷಿಸಲಾಯಿತು. ಇದರಿಂದಾಗಿ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗಿದೆ. ಭಾರತ ಟೂರ್ನಿಯಲ್ಲಿ 5 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿ ಹಾಗೂ ನ್ಯೂಜಿಲೆಂಡ್ 7 ಅಂಕ ಗಳೊಂದಿಗೆ ಮೊದಲ ಸ್ಥಾನದಲ್ಲಿವೆ.
ವಿರಾಟ್ ಪಡೆ ಮುಂದಿನ ಪಂದ್ಯವನ್ನು ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಭಾನುವಾರ ಆಡಲಿದೆ. ನ್ಯೂಜಿಲೆಂಡ್ ತಂಡ ಜೂನ್ 19 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟ ನಡೆಸಲಿದೆ.