Wednesday, January 22, 2025
ಸುದ್ದಿ

ಮುಲ್ಲರಪಟ್ನಾ ತಾತ್ಕಾಲಿಕ ರಸ್ತೆ ಬಂದ್ – ಕಹಳೆ ನ್ಯೂಸ್

ಬಂಟ್ವಾಳ: ಮುಲ್ಲರಪಟ್ನಾ ತಾತ್ಕಾಲಿಕ ರಸ್ತೆಯಲ್ಲಿ ನದಿಯಲ್ಲಿ ನೀರು ಬಂದ ಕಾರಣ ಇಂದು ಬಂದ್ ಮಾಡಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ಪ್ರಯಾಣಿಕರು ಸಹಕರಿಸಬೇಕಾಗಿ ವಿನಂತಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳು ಹರಿದಾಡುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ಮಳೆಗಾಲ ಆರಂಭವಾಗುತ್ತಿದ್ದಂತೆ ಜೂನ್ ತಿಂಗಳಲ್ಲಿ 24 ರಂದು ಮುಲ್ಲರಪಟ್ನ ಸೇತುವೆ ಮುರಿದು ಬಿದ್ದಿತು. ಬಿಸಿರೋಡಿನಿಂದ ಕುಪ್ಪೆಪದವು ಕಟೀಲು ಬಜಪೆ ಸಂಪರ್ಕದ ಮುಲ್ಲರಪಟ್ನ ಸೇತುವೆ ಮುರಿದು ಬೀಳುವ ಮೂಲಕ ಈ ಭಾಗದ ಜನರ ಸಂಪರ್ಕ ಕಡಿದು ಹೋಗಿತ್ತು. ಬಿಸಿರೋಡಿನಿಂದ ಕುಪ್ಪೆಪದವು ಹಾಗೂ ಮುಲ್ಲರಪಟ್ನನಿಂದ ಬಿಸಿರೋಡ್ ಕಡೆಗೆ ನಿತ್ಯ ಬರುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಡೆದುಕೊಂಡು ಹೋಗುವುದಕ್ಕಾಗಿ ಮುಲ್ಲರಪಟ್ನದಲ್ಲಿನ ತೂಗುಸೇತುವೆಯಲ್ಲಿ ಅವಕಾಶ ನೀಡಲಾಗಿತ್ತು. ತೂಗು ಸೇತುವೆಯ ಸಾಮಾಥ್ರ್ಯದ ಬಗ್ಗೆ ಯೂ ಸಾಕಷ್ಟು ಹೆದರಿಕೆಯಲ್ಲಿದ್ದ ಜನ ಹೇಗೋ ಮಳೆಗಾಲ ಮುಗಿಯುವವರೆಗೂ ನಡೆದುಕೊಂಡು ಹೋಗಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಳೆ ಕಡಿಮೆಯಾಗುತ್ತಿದ್ದಂತೆ ಇಲ್ಲಿನ ಸಾರ್ವಜನಿಕರು ನದಿಗೆ ಮಣ್ಣು ಹಾಗೂ ಸಿಮೆಂಟ್ ಮೋರಿಗಳನ್ನು ಹಾಕಿ ತಾತ್ಕಾಲಿಕವಾದ ರಸ್ತೆ ನಿರ್ಮಾಣ ಮಾಡಿದ್ದರು. ಅ ವೇಳೆ ಇದು ಅಕ್ರಮ ಮರಳು ಸಾಗಾಟ ಮಾಡುವ ಉದ್ದೇಶದಿಂದ ರಸ್ತೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಿ ಪ್ರಕರಣ ಪೋಲೀಸ್ ಮೆಟ್ಟಿಲೇರಿತ್ತು. ಬಳಿಕ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿದಿತ್ತು. ನಂತರದ ದಿನಗಳಲ್ಲಿ ಈ ರಸ್ತೆಯ ಮೂಲಕ ಬಸ್ ಸಹಿತ ಘನ ವಾಹನಗಳು ಸಂಚಾರ ಮಾಡುತ್ತಿದ್ದವು.
ಆದರೆ ಮಳೆ ಪ್ರಾರಂಭವಾಗುತ್ತಿದ್ದಂತೆ ಈ ಮಣ್ಣು ಹಾಕಿದ ರಸ್ತೆ ನೀರಿನಲ್ಲಿ ಹೋಗುವ ಲಕ್ಷಣಗಳು ಕಾಣುತ್ತಿದ್ದು ಅಪಾಯದ ಸೂಚನೆ ನೀಡಿದೆ. ಹಾಗಾಗಿ ನಾಳೆಯಿಂದ ಈ ರಸ್ತೆಯನ್ನು ಬಂದ್ ಮಾಡಲಾಗುತ್ತದೆ ಎಂಬ ಸಂದೇಶಗಳು ರವಾನೆಯಾಗುತ್ತಿದೆ.

ಕಳೆದ ಒಂದು ವರ್ಷದಿಂದ ಈ ಭಾಗದ ಜನರಿಗೆ ಸಂಚಾರಕ್ಕೆ ಬಹಳಷ್ಟು ತೊಂದರೆಯಾಗಿದ್ದು, ಜನ ಪ್ರತಿ ನಿಧಿಗಳು ಹಾಗೂ ಅಧಿಕಾರಿ ವರ್ಗ ಸೇತುವೆ ನಿರ್ಮಾಣಕ್ಕೆ ಅಥವಾ ಬದಲಿ ವ್ಯವಸ್ಥೆ ಕಲ್ಪಿಸುವ ಮನಸ್ಸು ಮಾಡಬೇಕಾಗಿತ್ತು. ಇಷ್ಟೆಲ್ಲಾ ಮುಂದುವರಿದ ದಿನಗಳಲ್ಲಿ ಒಂದು ವರ್ಷ ಕಳೆದರೂ ಈ ಭಾಗದ ಪ್ರಮುಖ ಸೇತುವೆಯಾಗಿರುವ ಮುಲ್ಲರಪಟ್ನ ಸೇತುವೆ ಪುನರ್ ನಿರ್ಮಾಣದ ಕಾಯಕಕ್ಕೆ ಸರಕಾರ ಮುಂದೆ ಬಾರದೆ ಇರುವುದು ಜನರಿಗೆ ಮಾಡಿದ ಮೋಸವಾಗಿದೆ ಎಂದು ಇಲ್ಲಿನ ಸ್ಥಳೀಯರ ಅಭಿಪ್ರಾಯ. ಜಿಲ್ಲಾಧಿಕಾರಿ ಗಳು ಸ್ಥಳಕ್ಕೆ ಬೇಟಿ ನೀಡಿ ಮಳೆಗಾಲದಲ್ಲಿ ಜನರು ಸಂಚಾರಕ್ಕೆ ಪಡುವ ಕಷ್ಟ ಅಥವಾ ಅವರಿಗಾಗುವ ನಷ್ಟವನ್ನು ಕಣ್ಣಾರೆ ನೋಡಬೇಕಾಗಿದೆ.

ಜನರ ತಾಳ್ಮೆ ಪ್ರತಿಭಟನಾ ರೂಪವಾಗಿ ಮಾರ್ಪಾಡಾಗುವ ಮೊದಲು ಅಥವಾ ಮಳೆಗಾಲದಲ್ಲಿ ಅನಾಹುತಗಳು ನಡೆಯವ ಮುನ್ನ ಎಚ್ಚೆತ್ತುಕೊಂಡು ಜಿಲ್ಲಾಡಳಿತ ಬದಲಿ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ವಿನಂತಿಸಿಕೊಂಡಿದ್ದಾರೆ