Wednesday, January 22, 2025
ಸುದ್ದಿ

ಶಿಕ್ಷಕಿ ಮೇಲೆ ಗುಂಡಿನ ದಾಳಿ-ಕಹಳೆ ನ್ಯೂಸ್

ಮಡಿಕೇರಿ: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಬಾಳೆಲೆಯಲ್ಲಿ ಶಾಲಾ ಬಸ್‍ಗಾಗಿ ಕಾಯುತ್ತ ನಿಂತಿದ್ದ ಶಿಕ್ಷಕಿ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.

ಗುಂಡಿನ ದಾಳಿಯಿಂದಾಗಿ ಶಿಕ್ಷಕಿ ಆಶಾ ಕಾವೇರಮ್ಮ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಬಾಳೆಲೆಯಲ್ಲಿ ಶಾಲಾ ಬಸ್‍ಗೆ ಕಾಯುತ್ತ ನಿಂತಿದ್ದ ವೇಳೆಯಲ್ಲಿ ಆಶಾ ಕಾವೇರಮ್ಮ ಅವರ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲಯನ್ಸ್ ಶಾಲೆಯ ಶಿಕ್ಷಕಿಯಾಗಿರುವ ಆಶಾ ಕಾವೇರಮ್ಮ ಪೊಲೀಸ್ ಉಪ ಠಾಣೆ ಎದುರು ನಿಂತಿದ್ದ ವೇಳೆ ಫೈರಿಂಗ್ ಮಾಡಲಾಗಿದೆ. ಅವರನ್ನು ರಕ್ಷಿಸಲು ಹೋದ ದಿನೇಶ್ ಎಂಬ ಯುವಕನಿಗೆ ಗಾಯಗಳಾಗಿದ್ದು, ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಬಾಳೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು