Tuesday, January 21, 2025
ಸುದ್ದಿ

ಸಾಮಾಜಿಕ ಜಾಲ ತಾಣದಲ್ಲಿ ಮತ್ತೆ ಹರಿದಾಡುತ್ತಿರುವ ಅಸಂಬದ್ಧ ಹೇಳಿಕೆಗೆ ಗ್ರಾಮಸ್ಥರ ಮತ್ತು ಮಹಿಳಾ ಸದಸ್ಯರ ತೀವ್ರ ಖಂಡನೆ – ಕಹಳೆ ನ್ಯೂಸ್

ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಎದುರು ಮೋರಿ ಆಳವಡಿಕೆಗೆ ಸಹಕಾರಿ ಸಂಘದಿಂದ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಅಭಿವೃದ್ದಿಗೆ ಪೂರಕವಾಗಿಯೇ ಅವರು ಅಧ್ಯಕ್ಷರ ಕರೆಗೆ ಅನುಗುಣವಾಗಿ ಕಾರ್ಯಪ್ರವೃತ್ತರಾಗಿ ದಿ 10-06-2019 ರಂದು ಕಮಿಟಿ ಮೀಟಿಂಗ್ ಕರೆದು ಮೋರಿ ಆಳವಡಿಸಲು ನಿರ್ಧರಿಸಿ (ಈ ಬಗ್ಗೆ ಲಿಖಿತ ದಾಖಲೆಗಳು ಲಭ್ಯ) ಮತ್ತು ಪಂಚಾಯತ್ ವಾರ್ಡ್ ಸದಸ್ಯ ಹಾಗೂ ಅಧ್ಯಕ್ಷರ ಗಮನಕ್ಕೆ ತಂದಿರುತ್ತಾರೆ. ಇದಾದ ನಂತರ ದಿ 12-06-2019 ರಂದು ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಮಹಿಳಾ ಸಂಘದ ಬಗ್ಗೆ ಬರೆದರೆ ಅಂತಹವರನ್ನು ಪುಂಡಾಟಿಕೆ ಅನ್ನಬೇಕೋ ಅಥವಾ ಪುಢಾರಿಗಳು ಅನ್ನಬೇಕೋ ಅನ್ನುವುದು ನಿಮಗೆ ಬಿಟ್ಟದ್ದು…

ಯಾವೂದೇ ಒಂದು ಸರಕಾರದ ಅಥವಾ ಸಹಕಾರಿ ಸಂಘದ ನಿಯಮ ಪ್ರಕಾರವಾಗಿ ಕಾರ್ಯ ಚಟುವಟಿಕೆಯಲ್ಲಿರುವಾಗ ಆ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಬರೆಯುವುದು ಮತ್ತು ಕಾರ್ಯ ಚಟುವಟಿಕೆಗೆ ಅಡಚಣೆ ಒಡ್ಡುವುದು ಅಭಿವೃದ್ಧಿಯೇ…? ಸಾಮಾಜಿಕ ಕಾಳಜಿಯೇ…? ಇದು ಎಷ್ಟು ಸರಿ..? ಅಂತಹವರನ್ನು ಅಲ್ಪಜ್ಞಾನಿಗೆ ಅನ್ನಲೋ ಅವಿವೇಕಿ ಅನ್ನಲೋ ನಿಮ್ಮ ವೀವೆಚನೆಗೆ ಬಿಟ್ಟದ್ದು…

ಜಾಹೀರಾತು
ಜಾಹೀರಾತು
ಜಾಹೀರಾತು

ಸಮಾಜ ಅಂದರೆ ಬಬ್ಬ ವ್ಯಕ್ತಿಯಲ್ಲ, ನೀವು ಬರೆದಿರುವುದು ಒಂದು ಸಹಕಾರಿ ಸಂಘದ ಬಗ್ಗೆ, ಸಂಘ ಅಂದರೆ ಅದರಲ್ಲಿ ಸದಸ್ಯರು ಮತ್ತು ಗ್ರಾಮಸ್ಥರನ್ನು ಒಳಗೊಂಡಿರುತ್ತದೆ.. ಒಟ್ಟಿನಲ್ಲಿ ಸುಸೂತ್ರವಾಗಿ ನಡೆಯುತ್ತಿದ್ದ ಕಾರ್ಯ ಚಟುವಟಿಕೆಯಲ್ಲಿ ಗೊಂದಲ ಸೃಷ್ಟಿಸಿದ್ದು ನೀವೆ. ಮಾದ್ಯಮವು ಈ ನಿಟ್ಟಿನಲ್ಲಿ ವಸ್ತುನಿಷ್ಠ ವರದಿಯನ್ನು ಮಾಡಿರುತ್ತದೆ, ಮತ್ತು ಗೊಂದಲವನ್ನು ನಿವಾರಿಸುವ ಪ್ರಯತ್ನವನ್ನು ಮಾಡಿರುತ್ತದೆ, ಒಟ್ಟಿನಲ್ಲಿ ಮೋರಿ ಹಾಕುವ ಬಗ್ಗೆ ಸಂಘವು ನಿರ್ಣಯ ತೆಗೆದುಕೊಂಡ ಮೇಲೆ ಅದರ ಬಗ್ಗೆ ಸರಿಯಾದ ಮಾಹಿತಿ ಪಡೆದು ಕೊಳ್ಳದೆ ಬರೆದಿರುವುದು ತಪ್ಪು ಎಂಬುವುದು ಸಂಘದ ಸದಸ್ಯರು ಮತ್ತು ಗ್ರಾಮಸ್ಥರ ಅಭಿಪ್ರಾಯ.

ಜಾಹೀರಾತು
ಜಾಹೀರಾತು
ಜಾಹೀರಾತು