Recent Posts

Tuesday, January 21, 2025
ಸುದ್ದಿ

ಬಡ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ ರಾಜಕೇಸರಿ ಸಂಘಟನೆಯು ಸರ್ವ ಸದಸ್ಯರು – ಕಹಳೆ ನ್ಯೂಸ್

ಉಡುಪಿ ಮತ್ತು ಬೈಂದೂರಿನಲ್ಲಿ ರಾಜಕೇಸರಿ ಸಂಘಟನೆಯು ಸರ್ವ ಸದಸ್ಯರು ಒಟ್ಟುಗೂಡಿ ನೀರಿನ ಬಾಟಲನ್ನು ಸೇಲ್ ಮಾಡಿ ಮಾರಾಟ ಮಾಡಿ ಬಂದಂತ ಲಾಭದ ಹಣವನ್ನು ರಜಿನಿ ಹೆಮ್ಮಾಡಿ ರವಿ ಶಿರ್ವ ಶೇಷ ಮರಾಠಿ ಬೈಂದೂರು ಇವರಿಗೆ ಸಹಾಯ ಹಸ್ತ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿಯ ಸರ್ವಿಸ್ ಬಸ್ ಸ್ಟಾಂಡ್ ಸಿಟಿ ಬಸ್ ಸ್ಟ್ಯಾಂಡ್ ಹಾಗೂ ಕಾಲೇಜ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ನೀರಿನ ಬಾಟಲನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದ್ದಾರೆ. ಕಾರ್ಯಕ್ರಮಕ್ಕೆ ಕಾರ್ಕಳದ ಶಾಸಕರಾದ ಅಂತಹ ಸುನಿಲ್ ಕುಮಾರ್ ಅವರು ಚಾಲನೆಯನ್ನು ನೀಡಿದರು. ಹಾಗೂ ಉಡುಪಿಯಲ್ಲಿ ಶ್ರೀಯುತ ಯಶ್ಪಾಲ್ ಸುವರ್ಣರವರು ಬಂದು ಕಾರ್ಯಕ್ರಮಕ್ಕೆ ಹೊಸ ಮೆರುಗು ತಂದುಕೊಟ್ಟರು. ಹಾಗೂ ಮಾಧ್ಯಮದ ಪತ್ರಿಕಾ ಮಿತ್ರರು ಒಳ್ಳೆಯ ಪ್ರೋತ್ಸಾಹವನ್ನು ನೀಡಿದರು,

ಜಾಹೀರಾತು
ಜಾಹೀರಾತು
ಜಾಹೀರಾತು

ಇವತ್ತಿನ ನೀರಿನ ಬಾಟಲನ್ನು ಸೇಲ್ ಮಾಡಿ ಬಂದಂತ ಲಾಭದ ಹಣವನ್ನು ರಜಿನಿ ಹೆಮ್ಮಾಡಿ ರವಿ ಶಿರ್ವ ಶೇಷ ಮರಾಠಿ ಬೈಂದೂರು ಇವರಿಗೆ ಸಹಾಯ ಹಸ್ತವನ್ನು ನೀಡಲಾಗುತ್ತದೆ. ಒಟ್ಟು ಮೊತ್ತ 58.750 ಇದರಲ್ಲಿ ನೀರಿನ ಖರ್ಚು ಹಾಗೂ ಗಾಡಿಯ ಖರ್ಚು 25,200 ಆಗಿದ್ದು ಉಳಿದ ಮೊತ್ತ 33,500 ಈ ಮೂರು ಬಡಕುಟುಂಬಗಳಿಗೆ ಕೊಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ರಾಜ ಕೇಸರಿ ಸಂಸ್ಥಾಪಕರಾದ ದೀಪಕ್ ಬೆಳ್ತಂಗಡಿ ಪ್ರಶಾಂತ್ ಮೊಗವೀರ ಬೈಂದೂರು ಸಸಂತೋಷ್ ಬೈಂದೂರು ಲೋಕೇಶ್ ಕುತ್ಲೂರು ಸುಧಿರ್ ಭಂಡಾರಿಹಾಗೂ ಸಂಘದ ಎಲ್ಲಾ ಕಾರ್ಯಕರ್ತರು ಭಾಗಿಯಾಗಿದ್ದರು.