Tuesday, January 21, 2025
ಸುದ್ದಿ

ಖಾಸಗಿ ಶಾಲಾ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಢಿಕ್ಕಿ-ಕಹಳೆ ನ್ಯೂಸ್

ಕಡಬ: ಖಾಸಗಿ ಶಾಲಾ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರ ಗಂಭೀರ ಗಾಯಗೊಂಡ ಘಟನೆ ಗುರುವಾರ ಸಂಜೆ ರಾಮಕುಂಜದಲ್ಲಿ ಸಂಭವಿಸಿದೆ.

ಗಾಯಾಳು ಸವಾರನನ್ನು ಕೊೈಲ ಗ್ರಾಮದ ನೆಲ್ಯೊಟ್ಟು ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಪುತ್ರ, ಇರ್ಫಾನ್ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಇರ್ಫಾನ್ ಇತ್ತೀಚೆಗೆ ಊರಿಗೆ ಬಂದಿದ್ದು, ಇಂದು ಬೆಂಗಳೂರಿಗೆ ಹೋಗುವವರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುವಾರ ಸಂಜೆ ತನ್ನ ದ್ವಿಚಕ್ರ ವಾಹನದಲ್ಲಿ ಉಪ್ಪಿನಂಗಡಿಗೆ ತೆರಳಿದ್ದು, ಮನೆಗೆ ಹಿಂತಿರುಗುತ್ತಿದ್ದಾಗ ರಾಮಕುಂಜ ಗ್ರಾಮದ ಪಾಲೆತ್ತಡಿ ಎಂಬಲ್ಲಿರುವ ಆಯಿಶಾ ವಿದ್ಯಾ ಸಂಸ್ಥೆಯ ಬಸ್ ಢಿಕ್ಕಿಯಾಗಿದ್ದು, ಘಟನೆಯಲ್ಲಿ ಗಂಭೀರ ಸ್ವರೂಪದ ಗಾಯಗೊಂಡ ಇರ್ಫಾನ್‍ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು