Monday, January 20, 2025
ಸಿನಿಮಾಸುದ್ದಿ

ಸ್ಯಾಂಡಲ್‍ವುಡ್ ಮತ್ತು ಕೋಸ್ಟಲ್‍ವುಡ್‍ನಲ್ಲಿ ಮುಂದುವರೆದ ಹರೀಶ್ ‘ಯಾನ’ – ಕಹಳೆ ನ್ಯೂಸ್

ಸ್ಯಾಂಡಲ್‍ವುಡ್‍ನಲ್ಲಿ ಸದಭಿರುಚಿಯ ಸಾಮಾಜಿಕ ಸಂದೇಶಗಳನ್ನು ಒಳಗೊಂಡ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ಮಂಗಳೂರು ಮೂಲದ ನಿರ್ಮಾಪಕ ಹರೀಶ್ ಶೇರಿಗಾರ್.

ನೀರಿನ ಸಮಸ್ಯೆಯನ್ನು ಮೂಲ ಕಥಾವಸ್ತುವನ್ನಾಗಿಟ್ಟುಕೊಂಡು ‘ಮಾರ್ಚ್ 22’ ಎಂಬ ಉತ್ತಮ ಚಿತ್ರವನ್ನು ಮೊದಲಿಗೆ ನಿರ್ಮಾಣ ಮಾಡಿದ್ದರು. ಈ ಚಿತ್ರದಲ್ಲಿ ಸುಚೇಂದ್ರ ಪ್ರಸಾದ್ ಮೇರು ನಟ ಅನಂತ್‍ನಾಗ್ ಮೊದಲಾದವರು ಅದ್ಭುತ ಅಭಿನಯ ನೀಡಿದ್ದರು ಜೊತೆಗೆ ಕಥೆ ನಿರ್ದೇಶನವೂ ಚೆನ್ನಾಗಿತ್ತು ಆದರೆ ಕಮರ್ಷಿಯಲ್ ಆಗಿ ಚಿತ್ರ ದೊಡ್ಡ ಯಶಸನ್ನುಗಳಿಸಿಲ್ಲವಾದರು ಕರ್ನಾಟಕ ರಾಜ್ಯ ಪ್ರಶಸ್ತಿ ದೊರೆತಿದೆ ಎನ್ನುವುದು ಖುಷಿಯ ವಿಚಾರ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಾದ ಮೇಲೆ ಅನಂತ್‍ನಾಗ್ ಹಾಗು ರಾಧಿಕಾ ಚೇತನ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ ಚಿತ್ರ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಈ ಚಿತ್ರದ ನಂತರ ವೈಭವಿ, ವೈನಿಧಿ ಮತ್ತು ವೈಸಿರಿ ಎಂಬ ನವ ನಾಯಕಿಯರನ್ನು ಹಾಕಿಕೊಂಡು ‘ಯಾನ’ ಎಂಬ ಯೂತ್‍ಫುಲ್ ಚಿತ್ರದ ನಿರ್ಮಾಣ ಮಾಡಿದ್ದಾರೆ ಹರೀಶ್.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂವರು ನಾಯಕಿಯರ ಜೊತೆಗೆ ಅನಂತ್‍ನಾಗ್ ಮತ್ತು ಸುಹಾಸಿನಿ ಜೋಡಿಯು ಕಮಾಲ್ ಮಾಡಲಿದೆ. ಯಾನವನ್ನು ನಿರ್ದೇಶನ ಮಾಡಿರುವುದು ವಿಜಯಲಕ್ಷ್ಮೀ ಸಿಂಗ್ ಎನ್ನುವುದು ನಾವು ಗಮನಿಸಬೇಕಾದ ಸಂಗತಿ. ಚಿತ್ರವೀಗ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಇತ್ತೀಚಿಗೆ ಸೆನ್ಸಾರ್‍ನಿಂದ ಕ್ಲೀನ್ ‘ಯು’ ಸರ್ಟಿಫಿಕೇಟ್ ದೊರೆತಿದೆ.

ಮೂರು ಕನ್ನಡ ಚಿತ್ರವಾದ ಮೇಲೆ ಹರೀಶ್ ಅವರು ತುಳು ಚಿತ್ರರಂಗದತ್ತ ಮುಖ ಮಾಡಿದ್ದಾರೆ ಕೋಸ್ಟಲ್‍ವುಡ್‍ನ ಸ್ಟಾರ್ ನಿರ್ದೇಶಕ ಕೆ ಸೂರಜ್ ಶೆಟ್ಟಿ ಜೊತೆಗೆ ‘ಇಂಗ್ಲೀಷ್’ ಎಂಕ್ಲೆಗ್ ಬರ್ಪುಜ್ಜಿ ಬ್ರೋ ಎಂಬ ತುಳು ಸಿನೆಮಾದ ನಿರ್ಮಾಣ ಈಗಾಗಲೇ ಮಾಡಿ ಮುಗಿಸಿದ್ದಾರೆ ಈ ಚಿತ್ರದ ವಿಶೇಷತೆ ಎಂದರೆ ಹರೀಶ್ ನಿರ್ಮಾಣದ ಎಲ್ಲಾ ಕನ್ನಡ ಚಿತ್ರಗಳಂತೆ ಈ ಚಿತ್ರದಲ್ಲೂ ಅನಂತ್‍ನಾಗ್ ಅಭಿನಯಿಸಿದ್ದಾರೆ. ಈ ಮೂಲಕ ಅನಂತ್‍ನಾಗ್‍ರನ್ನು ತುಳು ಚಿತ್ರಗಳಿಗೆ ಪರಿಚಯಿಸಿದ ಖ್ಯಾತಿ ಹರೀಶ್ ಶೇರಿಗಾರ್ ಅವರಿಗೆ ಸಲ್ಲುತ್ತದೆ.

‘ಯಾನ’ ಚಿತ್ರವು ಇದೇ ಬರುವ ಜುಲೈ 12 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಇದಾದ ಮೇಲೆ ಆಗಸ್ಟ್‍ನಲ್ಲಿ ತುಳು ಸಿನೆಮಾ ‘ಇಂಗ್ಲೀಷ್’ ಬಿಡುಗಡೆಯಾಗಲಿದೆ ಈ ಚಿತ್ರದಲ್ಲಿ ಡೇರಿಂಗ್ ಸ್ಟಾರ್ ಪೃಥ್ವಿ ಅಂಬರ್ ನಾಯಕನಾಗಿ ನಟಿಸಿದ್ದಾರೆ. ಎರಡೂ ಚಿತ್ರಗಳು ಹರೀಶ್ ಅವರ ಸಿನೆಮಾ ಯಾನಕ್ಕೆ ಮೈಲೇಜ್ ತಂದುಕೊಡಲಿ ಎಂಬುವುದೇ ‘ಕಹಳೆ ನ್ಯೂಸ್’ ಆಶಯ…

ಭಾರವಿ ಫಿಲ್ಮ್ ಬ್ಯೂರೋ, ಕಹಳೆ ನ್ಯೂಸ್