ಶತಮಾನಗಳ ಮುಸ್ಲಿಂ ಮಹಿಳೆಯರ ಶೋಷಣೆಗೆ ಬಿತ್ತು ತೆರೆ | ತ್ರಿವಳಿ ತಲಾಖ್ ವಿರೋಧಿ ಮಸೂದೆಗೆ ಅಂಗೀಕಾರ ; ಮೋದಿ ನಿಲುವಿಗೆ ಮುಸ್ಲಿಂ ಮಹಿಳೆಯರ ಜೈಕಾರ!
Highlights
– ತ್ರಿವಳಿ ತಲಾಖ್ ಅನ್ನು ಅಪರಾಧವೆಂದು ಪರಿಗಣಿಸುವ ಮಸೂದೆ ಲೋಕಸಭೆಯಲ್ಲಿ ಅಂಗೀಕೃತ
– ಮುಸ್ಲಿಂ ಮಹಿಳೆಯರಿಂದ ಮೋದಿ ಸರಕಾರಕ್ಕೆ ಮೆಚ್ಚುಗೆ
– ಧ್ವನಿ ಮತದಿಂದ ಅಂಗೀಕೃತ.
ಮುಸ್ಲಿಂ ಮಹಿಳೆಯರ ಹಿತ ಕಾಯುವ ದೃಷ್ಟಿಯಿಂದ, ತ್ರಿವಳಿ ತಲಾಖ್ ವಿರೋಧಿಸುವ ‘ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ –2017’ ಇಂದು ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ.
ಹೊಸದಿಲ್ಲಿ : ಮುಸ್ಲಿಂ ಮಹಿಳೆಯರ ಹಿತ ಕಾಯುವ ದೃಷ್ಟಿಯಿಂದ, ತ್ರಿವಳಿ ತಲಾಖ್ ಅನ್ನು ಅಪರಾಧವೆಂದು ಪರಿಗಣಿಸುವ ‘ಮುಸ್ಲಿಂ ಮಹಿಳೆಯರ ವೈವಾಹಿಕ ಹಕ್ಕುಗಳ ರಕ್ಷಣೆ ಮಸೂದೆ –2017’ ಇಂದು ಲೋಕಸಭೆಯಲ್ಲಿ ಧ್ವನಿ ಮತದಿಂದ ಅಂಗೀಕಾರಗೊಂಡಿದೆ.
ಮಸೂದೆಯಲ್ಲಿನ ಕೆಲವು ಅಂಶಗಳ ವಿರುದ್ಧ ಕೆಲವು ಮೂಲಭೂತ ವಾದಿಗಳು ಹಾಗೂ ಪ್ರತಿಪಕ್ಷಗಳ ವಿರೋಧಿಸಿದ್ದು, ಮುಸ್ಲಿಂ ಮಹಿಳೆಯರ ಪರ ನಿಂತ ಸರಕಾರದ ವಿರುದ್ಧ ಟೀಕೆಗಳು ವ್ಯಕ್ತವಾಗಿದ್ದವು. ಕಾಂಗ್ರೆಸ್ ಈ ಮೂಸದೆ ವಿರೋಧ ವ್ಯಕ್ತಪಿಡಿಸಿದರೂ, ಲೋಕಸಭೆಯಲ್ಲಿ ಅಂಗೀಕೃತಗೊಂಡಿದೆ.
‘ಸಂವಿಧಾನ ಹಾಗೂ ಖುರಾನ್‌ಗೆ ವಿರೋಧವಾಗಿದ್ದರೆ ತ್ರಿವಳಿ ತಲಾಖ್ ನಿಷೇಧ ಮಸೂದೆಯನ್ನು ಒಪ್ಪಿಕೊಳ್ಳುವುದಿಲ್ಲ,’ ಎಂದು ಮುಸ್ಲಿಂ ಮಹಿಳಾ ವೈಯಕ್ತಿಕ ಮಂಡಳಿ ವಿರೋಧ ವ್ಯಕ್ತಪಡಿಸಿತ್ತು. ಎಲ್ಲ ವಿರೋಧಗಳ ನಡುವೆಯೂ ಐತಿಹಾಸಿಕ ಮಸೂದೆ ಮಂಡನೆಯಾಗಿದೆ.
ಸುದೀರ್ಘ ಕಾನೂನು ಹೋರಾಟದ ನಂತರ ಸುಪ್ರೀಂ ಕೋರ್ಟ್ ಕಳೆದ ಆಗಸ್ಟ್‌ನಲ್ಲಿ ತ್ರಿವಳಿ ತಲಾಖ್ ಪದ್ಧತಿ ಕಾನೂನು ಬಾಹಿರ, ಅಸಂವಿಧಾನಿಕವೆಂದು ತೀರ್ಪು ನೀಡಿತ್ತು. ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಮೋದಿ ಸರಕಾರ ಮಸೂದೆ ಮಂಡಿಸಿದೆ.