Tuesday, January 21, 2025
ಸುದ್ದಿ

ಕನಕ ಮಜಲಿನಲ್ಲಿ ಬೈಕ್ ಸ್ಕಿಡ್ : ಪೆರ್ಲಾಂಪಾಡಿ ಯುವಕ ಸಾವು – ಕಹಳೆ ನ್ಯೂಸ್

ಸುಳ್ಯ : ಕನಕ ಮಜಲು ಎಂಬಲ್ಲಿ ಬೈಕ್ ಸ್ಕಿಡ್ ಆಗಿ ಪುತ್ತೂರು ತಾಲೂಕಿನ ಪೆರ್ಲಾಂಪಾಡಿ ಗ್ರಾಮದ ಪ್ರಸಾದ್ ಎಂಬ ಯುವಕ ಮೃತ ಪಟ್ಟ ಘಟನೆ ವರದಿಯಾಗಿದೆ. ಪ್ರಸಾದ್ ಎಂಬವರು ತನ್ನ ದೊಡ್ಡಪ್ಪನ ಮಗಳ ಉತ್ತರ ಕ್ರಿಯಾದಿ ಸದ್ಗತಿ ಕಾರ್ಯಕ್ಕೆ ಆಗಮಿಸಿ ಹಿಂತಿರುಗಿ ಮನೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಗಂಭೀರ ಗಾಯಗೊಂಡ ಈತನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಕೊನೆಯುಸಿರೆಳೆದರು, ಇವರು ಪೆರ್ಲಾಂಪಾಡಿಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ಎಲ್ಲರಿಗೂ ಚಿರಪರಿಚಿತರಾಗಿದ್ದರು.

ಜಾಹೀರಾತು

ಜಾಹೀರಾತು
ಜಾಹೀರಾತು