ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ‘ಶ್ರೀ ಲಕ್ಷ್ಮಿನಾರಾಯಣ ಹೃದಯ ಹವನ’ದೊಂದಿಗೆ, 2019-20 ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವ – ಕಹಳೆ ನ್ಯೂಸ್
ಪುತ್ತೂರು: ಪುತ್ತೂರು ಧರ್ಮಸ್ಥಳ ಬಿಲ್ಡಿಂಗ್‍ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ ನಲ್ಲಿ ‘ಶ್ರೀ ಲಕ್ಷ್ಮಿನಾರಾಯಣ ಹೃದಯ ಹವನ’ದೊಂದಿಗೆ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಆರಂಭಗೊಂಡವು.
ಬೆಳಗ್ಗೆ ‘ಶ್ರೀ ಲಕ್ಷ್ಮಿನಾರಾಯಣ ಹೃದಯ ಹವನ’, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಪಿ. ವಿ. ಗೋಕುಲ್‍ನಾಥ್, ಪ್ರಾಂಶುಪಾಲರು ಹೇಮಲತಾ ಗೋಕುಲ್‍ನಾಥ್, ಉಪನ್ಯಾಸಕ ವೃಂದ, ಬೋಧಕೇತರರು, ಸಂಚಾಲಕರ ಕುಟುಂಬಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಂಸ್ಥೆ ಹಾಗೂ ವಿದ್ಯಾರ್ಥಿಗಳ ಒಳಿತಿಗಾಗಿ ಸಂಸ್ಥೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಲಕ್ಷ್ಮಿನಾರಾಯಣ ಹೃದಯ ಹವನ’ ನಡೆದಿದ್ದು, ತದನಂತರ ಅಪರಾಹ್ನ ಎಲ್ಲಾ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪಠ್ಯ-ಪ್ರವಚನ ಪ್ರಾರಂಭಿಸುವ ಮೂಲಕ ಶುಭಚಾಲನೆ ನೀಡಲಾಯಿತು.
ಪ್ರಗತಿ ಸ್ಟಡಿ ಸೆಂಟರ್ ಸಂಸ್ಥೆಯು ಕಳೆದ 12 ವರ್ಷಗಳಿಂದ ಅನುತ್ತೀರ್ಣ ವಿದ್ಯಾರ್ಥಿಗಳ ಬದುಕಿನಲ್ಲಿ ಭರವಸೆಯ ಭಾಷ್ಯ ಬರೆಯುತ್ತಿದೆ. ಹಂತ ಹಂತವಾಗಿ ಬೆಳೆದು ಬಂದಿರುವ ಸಂಸ್ಥೆಯು ವಿಭಿನ್ನ ಮತ್ತು ವಿಶೇಷ ಪ್ರಯತ್ನಗಳಲ್ಲಿ ರಾಜಯದೆಲ್ಲೆಡೆ ತನ್ನ ಛಾಪನ್ನು ಪಸರಿಸುತ್ತಿದೆ.