Friday, January 24, 2025
ಸುದ್ದಿ

ಮಹಿಳಾ ಸಹಕಾರಿ ಸಂಘದ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಅಸಂಬದ್ಧ ಹೇಳಿಕೆಗೆ ಸಂಬಂಧ ಪಟ್ಟಂತೆ ಸೌಹರ್ದತೆಯ ಸಭೆ – ಕಹಳೆ ನ್ಯೂಸ್

ಬಂದಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಬರೆದು ಸದಸ್ಯರು ಮತ್ತು ಗ್ರಾಮಸ್ಥರಲ್ಲಿ ಉಂಟಾದ ಗೊಂದಲ ನಿವಾರಣೆಗಾಗಿ ಸೌಹರ್ದತೆಯ ಸಭೆ ನಡೆಸಿದ್ದರು. ಸಂಘದ ಅಧ್ಯಕ್ಷರು, ನಿರ್ದೇಶಕರು ಮತ್ತು ಕಾರ್ಯಕಾರಿ ಸಮಿತಿ, ತಾಲೂಕು ಪಂಚಾಯತ್ ಸದಸ್ಯರು, ಗ್ರಾಮ ಪಂಚಾಯತ್ ಅಧ್ಯಕ್ಷರು ಮತ್ತು ವಾರ್ಡ್‍ನ ಸದಸ್ಯರು ಹಾಗೂ ಸಾಮಾಜಿಕ ಜಾಲ ತಾಣದಲ್ಲಿ ಈ ಬಗ್ಗೆ ಬರೆದ ಚಂದ್ರಹಾಸ ಕುಂಬಾರ್ ಅವರನ್ನು ಸಭೆಗೆ ಕರೆಯಲಾಗಿತ್ತು. ಆದರೆ ಸಭೆಯ ಅಂತಿಮ ಕಣದವರೆಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಚಂದ್ರಹಾಸ ಕುಂಬಾರ್ ಹಾಜರಾಗದೆ ಇರುವುದು ಪ್ರಶ್ನಾತೀತವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯು ಮಹಿಳಾ ಸಂಘದ ಅಧ್ಯಕ್ಷರಾದ ಮಮತಾ ಮತ್ತು ತಾಲೂಕು ಪಂಚಾಯತ್ ಸದಸ್ಯರಾದ ಕೃಷ್ಣಯ್ಯ ಆಚಾರ್ಯ ಅವರ ನೇತೃತ್ವದಲ್ಲಿ ನಡೆಯುತು, ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಚಂದ್ರಾವತಿ ಕೆ. ವೈ ವಾರ್ಡ್‍ನ ಸದಸ್ಯರಾದ ದಿನೇಶ್ ಗೌಡ ಖಂಡಿಗ, ಸುಂದರ ಪೂಜಾರಿ, ರೂಪಾ ವಿಶ್ವಕರ್ಮ ಹಾಗೂ ಮಹಿಳಾ ಸಂಘದ ನಿರ್ದೇಶಕರು ಮತ್ತು ಕಾರ್ಯಕಾರಿ ಸಮಿತಿಯು ಹಾಜರಿದ್ದು , ಸಭೆಗೆ ಗೈರು ಹಾಜರಾದ “ ಚಂದ್ರಹಾಸ ಕುಂಬಾರ್ “ ಇವರಿಗೆ ಇನ್ನೊಂದು ಅವಕಾಶ ನೀಡಿದ್ದು ದಿ 20-06-2019ರ ಒಳಗೆ ಸಾಮಾಜಿಕ ಜಾಲ ತಾಣದಲ್ಲಿ ಅವರು ಬರೆದ ತಪ್ಪು ಸಂದೇಶಕ್ಕೆ ತಪ್ಪೊಪ್ಪಿಗೆ ನೀಡಬೇಕೆಂದು ಮತ್ತು ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್ ನೀಡುವುದೆಂದು ಸರ್ವಾನುಮತದಿಂದ ತಿರ್ಮಾನಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ಹಾಲು ಉತ್ಪಾದಕರ ಸಹಕಾರಿ ಸಂಘದ ಮಂಗಳೂರು ಒಕ್ಕೂಟಕ್ಕು ಮಾಹಿತಿ ನೀಡಿದ್ದು, ಒಕ್ಕೂಟದ ಮೇಲಾಧಿಕಾರಿಗಳು ಈ ಬಗ್ಗೆ ಸೂಕ್ತ ಸಹಕಾರವನ್ನು ನೀಡುವುದೆಂದು ಭರವಸೆ ನೀಡಿರುತ್ತಾರೆ. ಒಟ್ಟಿನಲ್ಲಿ ಸಹಕಾರಿ ಸಂಘದ ಮಹಿಳಾ ಸದಸ್ಯರಿಗೆ ಗ್ರಾಮಸ್ಥರು ಮತ್ತು ಅಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿರುವುದು ಸಂಘದ ಕಾರ್ಯ ಚಟುವಟಿಕೆಯಲ್ಲಿ ಆತ್ಮವಿಶ್ವಾಸ ಹೆಚ್ಚಿಸಿರುವುದೆಂದು ಅಭಿಪ್ರಾಯಪಟ್ಟರು.