Friday, January 24, 2025
ಸುದ್ದಿ

ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ನೀತಿ ತಂಡದ ವತಿಯಿಂದ ರಕ್ತದಾನ ಶಿಬಿರ – ಕಹಳೆ ನ್ಯೂಸ್

ನೀತಿ ತಂಡ ಬೆಂಗಳೂರು ಸಂಸ್ಥೆಯ ಕಡಬ ಘಟಕ ಹಾಗೂ ಬ್ಲಡ್ ಹೆಲ್ಪ್ ಲೈನ್ ಬೆಂಗಳೂರು, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಈ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ಬ್ರಹತ್ ರಕ್ತ ದಾನ ಶಿಬಿರ ಜೂ 16 ಭಾನುವಾರ 9.30 ರಿಂದ ಮದ್ಯಾಹ್ನ 1.30ರ ವರೆಗೆ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ರಕ್ತ ದಾನ ಮಾಡಿದವರಿಗೆ ಯಾವುದೇ  ತುರ್ತು ಸಂದರ್ಭದಲ್ಲಿ ರಕ್ತ ಬೇಕಾದಲ್ಲಿ ನೀತಿ ತಂಡದ ವತಿಯಿಂದ ತಕ್ಷಣ ರಕ್ತದ ವ್ಯವಸ್ಥೆ ಕಲ್ಪಿಸಿ ಕೊಡಲಾಗುವುದು. ನೀವು ಈ ಶಿಬಿರದಲ್ಲಿ ರಕ್ತದಾನ ಮಾಡಿದ್ದೀರಿ ಎಂಬುದಕ್ಕೆ ಗುರುತಿನ ಚೀಟಿ ನೀಡಲಾಗುವುದು ಎಂದು ನೀತಿ ತಂಡ ಬೆಂಗಳೂರಿನ ಸ್ಥಾಪಕರು ಜಯನ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದಷ್ಟು ಹೆಚ್ಚು ಸಂಖ್ಯೆಯಲ್ಲಿ ದಾನಿಗಳು ಬಂದು ರಕ್ತ ದಾನ ಮಾಡಿ. ದಾನಗಳಲ್ಲಿ ಶ್ರೇಷ್ಠ ದಾನ ರಕ್ತ ದಾನ ನೀವು ಮಾಡುವ ರಕ್ತ ದಾನದಿಂದ ಒಂದು ಜೀವ ಉಳಿಯಬಹುದು. ಅದಕ್ಕಿಂತ ಪುಣ್ಯದ ಕೆಲಸ ಇನೊಂದು ಇಲ್ಲ ರಕ್ತದಾನ ಮಾಡಿ ಜೀವ ಉಳಿಸಿ.