ಮಂಗಳೂರು : ಧರ್ಮದ ರಕ್ಷಣೆ ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತ್ಯಕ್ಷ ಕಾರ್ಯ ಮಾಡಲು ಕಳೆದ ೬ ವರ್ಷಗಳಿಂದ ಗೋವಾದಲ್ಲಿ ಹಿಂದೂ ಅಧಿವೇಶನದ ಆಯೋಜನೆಯನ್ನು ಮಾಡಲಾಗುತ್ತಿದೆ. ಅದೇ ರೀತಿ ನಮ್ಮ ಮಂಗಳೂರಿನಲ್ಲಿಯೂ ಇಂತಹ ಜಿಲ್ಲಾ ಹಿಂದೂ ಅಧಿವೇಶನ ವನ್ನು ಆಯೋಜಿಸಲಾಗಿದೆ. ಜಿಲ್ಲೆಯ ಮಂಗಳೂರು, ಪುತ್ತೂರು, ಉಜಿರೆ, ಬಂಟ್ವಾಳ, ಸುಳ್ಯ ಈ ಸ್ಥಳಗಳಿಂದ ಹಿಂದೂ ಮುಖಂಡರು, ಸಾಮಾಜಿಕ ಕಾರ್ಯಕರ್ತರು, ದೇವಸ್ತಾನಗಳ ವಿಶ್ವಸ್ತರು ಅಧಿವೇಶನಕ್ಕೆ ಆಗಮಿಸಲಿದ್ದಾರೆ.
ಅಧಿವೇಶನದಲ್ಲಿ ದೇವಸ್ಥಾನಗಳ ರಕ್ಷಣೆ, ಗಲಭೆಪೀಡಿತ ಹಿಂದೂಗಳ ರಕ್ಷಣೆ, ಮತಾಂತರಕ್ಕೆ ತಡೆ, ಹಿಂದೂ ಸಂಘಟನೆಗಳ ದಮನ ನೀತಿ, ಲವ್ ಜಿಹಾದ್ಗೆ ಪ್ರತೀಕಾರ, ಸ್ವರಕ್ಷಣಾ ತರಬೇತಿ ವರ್ಗಗಳ ಅವಶ್ಯಕತೆ. ಇತ್ಯಾದಿ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಚರ್ಚಾಕೂಟ, ಅನುಭವ ಕಥನ ಮತ್ತು ಪ್ರತ್ಯಕ್ಷ ಆಯೋಜನೆ ಮಾಡಲಾಗುವುದು.
ಎಲ್ಲಾ ಪತ್ರಕರ್ತ ಬಂಧುಗಳು ಅಧಿವೇಶನದ ಉದ್ಘಾಟನೆ ಹಾಗೂ ಸಮಾರೊಪ ಕಾರ್ಯಕ್ರಮಕ್ಕೆ ಆಗಮಿಸಿ ಅಧಿವೇಶನಕ್ಕೆ ಹೆಚ್ಚಿನ ಪ್ರಸಿದ್ಧಿ ನೀಡಬೇಕೆಂದು ನಮ್ರವಾಗಿ ವಿನಂತಿಸಿಕೊಳ್ಳತ್ತಿದ್ದೇವೆ.
ಸ್ಥಳ : ಶ್ರೀ ಶಾರದಾ ವಿದ್ಯಾಲಯ, ಕೊಡಿಯಾಲ್ ಬೈಲ್, ಮಂಗಳೂರು.
ದಿನಾಂಕ : ೩೦ ಮತ್ತು ೩೧ ಡಿಸೆಂಬರ್, ೨೦೧೭.
ಸಮಯ : ಉದ್ಘಾಟನೆ : ೩೦ ರಂದು ಬೆಳಿಗ್ಗೆ ೧೧.೦೦. ಸಮಾರೋಪ : ೩೧ ರಂದು ಸಾಯಂಕಾಲ ೬.೦೦.