Friday, January 24, 2025
ಸುದ್ದಿ

ರಸ್ತೆ ಅಡ್ದಲಾಗಿ ಮಗುಚಿ ಬಿದ್ದ ಘನ ವಾಹನ – ಕಹಳೆ ನ್ಯೂಸ್

ಉಪ್ಪಿನಂಗಡಿ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ನೀರಕಟ್ಟೆ ಸಮೀಪದ ನೆಕ್ಕರೆ ಎಂಬಲ್ಲಿ ದೊಡ್ಡ ಗಾತ್ರದ ಲಾರಿಯೊಂದು ಹೆದ್ದಾರಿಗೆ ಅಡ್ದಲಾಗಿ ಮಗುಚಿ ಬಿದ್ದಿದ್ದು, ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಫೀಡ್ ತುಂಬಿಸಿಕೊಂಡು ಬರುತ್ತಿದ್ದ ಲಾರಿ ತಮಿಳುನಾಡು ನೋಂದಣಿಯದ್ದಾಗಿದೆ. ಪಲ್ಟಿಯಾದ ರಭಸಕ್ಕೆ ಫೀಡ್ ಚೀಲಗಳು ರಸ್ತೆಗೆ ಬಿದ್ದಿದೆ. ಇದೀಗ ಕೆಲ ವಾಹನಗಳು ಕಡಬ ಮಾರ್ಗದ ಮೂಲಕ ಕೈಕಂಬ ಅಥವಾ ಇಚಿಂಲಪಾಡಿ ಮೂಲಕ ತೆರಳಿ ಹೆದ್ದಾರಿಯನ್ನು ಸಂಪರ್ಕಿಸುತ್ತಿರುವ ವಿಚಾರ ತಿಳಿದುಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು