Thursday, January 23, 2025
ಸುದ್ದಿ

ಸರಸ್ವತೀ ವಿದ್ಯಾಲಯದಲ್ಲಿ ಹಿಂದೂ ಸಾಮ್ರಾಜ್ಯ ದಿನ ಆಚರಣೆ – ಕಹಳೆ ನ್ಯೂಸ್

ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಹಾಗೂ ಪದವಿಪೂರ್ವ ವಿದ್ಯಾಲಯ ಕಡಬ ಜಂಟಿಯಾಗಿ ಹಿಂದೂ ಸಾಮ್ರಾಜ್ಯ ದಿನವನ್ನು ಆಚರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪುಲಸ್ಯ.ರೈ ಇವರು ಶಿವಾಜಿಯ ಹುಟ್ಟು, ಹಿಂದೂ ಸಾಮ್ರಾಜ್ಯದ ಸ್ಥಾಪನೆಗೋಸ್ಕರ ಹೋರಾಡಿದ ರೀತಿಯನ್ನು ತಿಳಿಸಿದರು. ಪದವಿ ಪೂರ್ವ ಕಾಲೇಜು ವಿಭಾಗದ ಪ್ರಾಂಶುಪಾಲ ಮಹೇಶ್, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಇತಿಹಾಸದ ಅಧ್ಯಯನ ಯಾಕೆ ಮಾಡಬೇಕು? ಎಂಬುದನ್ನು ತಿಳಿಸಿಕೊಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೆಯೇ ಎಲ್ಲರೂ ಈ ಹಿಂದೂ ಸಾಮ್ರಾಜ್ಯ ದಿನದ ಉದ್ದೇಶವನ್ನು ಅರಿತುಕೊಳ್ಳಬೇಕು ಹಾಗೂ ಎಲ್ಲರಿಗೂ ಶಿವಾಜಿಯ ಆಶೀರ್ವಾದ,ಪ್ರೇರಣೆ ಸಿಗಲಿ ಎಂದು ಹಾರೈಸಿದರು. ಪ್ರೌಢ ವಿಭಾಗದ ಸಹ ಶಿಕ್ಷಕಿ ಸೌಮ್ಯ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸರಸ್ವತೀ ಪದವಿ ಪೂರ್ವ ಕಾಲೇಜಿನ ದ್ವೀತೀಯ ಪಿ.ಯು.ಸಿ ವಿದ್ಯಾರ್ಥಿ ಮಯೂರ್ ಸ್ವಾಗತಿಸಿ, ಪ್ರೌಢ ವಿಭಾಗದ ವಿದ್ಯಾರ್ಥಿ ಸರ್ವೇಶ್ ವಂದಿಸಿ, ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ ನಿಶ್ಮಿತಾ.ಪಿ ನಿರೂಪಿಸಿದರು.