ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ “ಹಿಂದೂ ಸಾಮ್ರಾಜ್ಯೋತ್ಸವ” – ಕಹಳೆ ನ್ಯೂಸ್
ದಿನಾಂಕ 15/06/2019 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಶಿವಾಜಿಯ ಪಟ್ಟಾಭಿಷೇಕ ದಿನವನ್ನು “ಹಿಂದೂ ಸಾಮ್ರಾಜ್ಯೋತ್ಸವ” ದಿನವನ್ನಾಗಿ ಆಚರಿಸಲಾಯಿತು.
ಕಾರ್ಯಕ್ರದಲ್ಲಿ ಅತಿಥಿಯಾಗಿ ಆಗಮಿಸಿದ ಪ್ರಾಂತ ಮಟ್ಟದ ಜವಾಬ್ದಾರಿ ಹೊಂದಿರುವವರು ಖ್ಯಾತ ಹರಿದಾಸರು, ಹಾಗೂ ಶ್ರೀರಾಮ ಪ್ರೌಢ ಶಾಲೆಯ ನಿವೃತ್ತ ದೈಹಿಕ ಶಿಕ್ಷಕರಾದ ರಾಧಾಕೃಷ್ಣ ಅಡ್ಯಂತಾಯ , ವೀರಶಿವಾಜಿಯ ಪಟ್ಟಾಭಿಷೇಕದ ಕಥೆ, ಸಾಧನೆ, ಹೋರಾಟ, ಶೌರ್ಯವನ್ನು ವಿವರಿಸುತ್ತಾ “ಕಥೆಯನ್ನು ಕೇವಲ ಕಥೆಯಾಗಿ ತೆಗೆದುಕೊಳ್ಳದೆ ಅದರ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಈ ಮೂಲಕ ರಾಷ್ಟ್ರದ ಏಳಿಗೆಗಾಗಿ ನಿತ್ಯ ದುಡಿಯುವ ಚೇತನವಾಗಿ ಬೆಳೆಯಬೇಕು. ಎಂದು ಮಕ್ಕಳಿಗೆ ಹಾರೈಸಿದರು. ಹಾಗೂ ಜೀಜಾಬಾಯಿ ಶಿವಾಜಿಯನ್ನು ಬೆಳೆಸಿದ ರೀತಿ ಎಲ್ಲಾ ತಾಯಂದಿರಿಗೆ ಮಾದರಿಯಾಗಬೇಕು” ಎಂದು ನುಡಿದರು.
ಅತಿಥಿಗಳಿಗೆ ಹೂಗುಚ್ಛ ನೀಡಿ ಸಾಂಕೇತಿಕವಾಗಿ ಸ್ವಾಗತಿಸಲಾಯಿತು. ವಿದ್ಯಾರ್ಥಿನಿಯರು ಸಾಮೂಹಿಕ ಗೀತೆಯನ್ನು ಹಾಡಿದರು.
ವೇದಿಕೆಯಲ್ಲಿ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತಿಯಿದ್ದರು.
ಕಾರ್ಯಕ್ರಮವನ್ನು ಶಿಕ್ಷಕರಾದ ವೇದಾವತಿ ನಿರೂಪಿಸಿ, ದಿವ್ಯಶ್ರೀ ಸ್ವಾಗತಿಸಿ, ಕುಸುಮಾ ವಂದಿಸಿದರು.