Thursday, January 23, 2025
ಸುದ್ದಿ

ಜೂನ್ 23ರಂದು, ದೇಶದ ಆರನೇ ರಾಜ್ಯದಲ್ಲಿ ಪಟ್ಲ ಫೌಂಡೇಶನ್ ಘಟಕದ ಉದ್ಘಾಟನೆ – ಕಹಳೆ ನ್ಯೂಸ್

ಕರಾವಳಿಯ ಗಂಡುಕಲೆ ಯಕ್ಷಗಾನವು ಕರ್ನಾಟಕ ಮತ್ತು ಭಾರತ ದೇಶಕ್ಕೆ ಸೀಮಿತವಾಗಿರದೆ ಅಂತರಾಷ್ಟೀಯದಲ್ಲೂ ಪ್ರಸಿದ್ಧಿಯಾಗಿರುತ್ತದೆ.

ಇತ್ತೀಚಿನ ಕೆಲವು ವರ್ಷಗಳಿಂದ ಯಕ್ಷಗಾನ ಕಲೆಯು ಮತ್ತಷ್ಟು ವಿಸ್ತಾರವಾಗಲು ಒಂದು ಕಾರಣ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಎಂದರೂ ತಪ್ಪಾಗಲಾರದು. ಯಾಕೆಂದರೆ ಫೌಂಡೇಶನಿನ ಘಟಕಗಳು ಎಲ್ಲೆಲ್ಲಿ ಉದಯವಾಗುತ್ತದೆಯೋ ಅಲ್ಲಿ ಘಟಕದ ಮೂಲಕ ಯಕ್ಷಗಾನ ಕಾರ್ಯಕ್ರಮವನ್ನು ಮಾಡುವುದರ ಮೂಲಕ ಯಕ್ಷಗಾನ ಕಲೆಯನ್ನು, ಟ್ರಸ್ಟ್ ಇನ್ನಷ್ಟು ವಿಸ್ತಾರಗೊಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ ದೇಶದಲ್ಲಿ ಈಗಾಗಲೇ 5 ರಾಜ್ಯಗಳಲ್ಲಿ ಟ್ರಸ್ಟ್ ಘಟಕಗಳು ಸಕ್ರಿಯವಾಗಿ ತನ್ನ ಕಾರ್ಯಕ್ರಮಗಳನ್ನು ಮಾಡುತ್ತಿದೆ.

ಜೂನ್ 23ರಂದು ದೇಶದ 6 ನೇ ರಾಜ್ಯ ತಮಿಳುನಾಡಿನ ಚೆನೈ ಟಿ. ನಗರದ ಕರ್ನಾಟಕ ಸಂಘದ ರಾಮರಾವ್ ಕಲಾಮಂಟಪದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ 34 ನೇ ಘಟಕವು ಉಧ್ಘಾಟನೆಗೊಳ್ಳಲಿದೆ.

ಆ ದಿನ ಸಂಜೆ 4-00 ಗಂಟೆಯಿಂದ 5-00 ವರೆಗೆ ” ಕರ್ಣಾವಸಾನ ” ಪ್ರಸಂಗದ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.

ತದನಂತರ 5-15 ರಿಂದ 6-00 ರ ವರೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.

ತದನಂತರ 6-00 ರಿಂದ 8-00 ಗಂಟೆ ವರೆಗೆ ” ಶ್ರೀನಿವಾಸ ಕಲ್ಯಾಣ ” ಎಂಬ ಯಕ್ಷಗಾನ ಬಯಲಾಟ ಪ್ರದರ್ಶನವಿರುತ್ತದೆ.

ಯಕ್ಷಗಾನದ ಸರ್ವ ಕಲಾಭಿಮಾನಿಗಳನ್ನು ಚೆನೈ ಘಟಕದ ಗೌರವಧ್ಯಕ್ಷರಾದ ನಾರಾಯಣ ಭಟ್, ಅಧ್ಯಕ್ಷರಾದ ಗಣೇಶ್ ನಾಯಕ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಮತ್ತು ಕೋಶಾಧಿಕಾರಿ ಶ್ರೀನಿವಾಸ್ ರಾವ್ ಪ್ರೀತಿಯಿಂದ ಆಮಂತ್ರಿಸಿರುತ್ತಾರೆ.