Thursday, January 23, 2025
ರಾಜಕೀಯಸುದ್ದಿ

ಶೋಭಾ ಅವರಿಗೆ ಸಚಿವಸ್ಥಾನ ಸಿಗದಿದ್ದರೆ ಅದಕ್ಕೆ ನಾವು ಹೊಣೆಯಲ್ಲ – ಐವಾನ್ ಡಿಸೋಜ – ಕಹಳೆ ನ್ಯೂಸ್

ಬೆಳ್ತಂಗಡಿ: ರಾಜ್ಯದ ಬಿಜೆಪಿ ಮುಖಂಡರುಗಳು ಕೇಂದ್ರ ಸರಕಾರದ ವಿರುದ್ದ ಅಲ್ಲಿನ ಮುಖಂಡರುಗಳಿಗೆ ಮಾತನಾಡಲು ಧೈರ್ಯವಿಲ್ಲದೆ ರಾಜ್ಯ ಸರಕಾರದ ವಿರುದ್ದ ಪ್ರತಿಭಟನೆ ಮಾಡುತ್ತಿದ್ದಾರೆ, ಅವರು ಧರಣಿ ಮಾಡಬೇಕಾದುದು ಕೇಂದ್ರ ಸರಕಾರ ರಾಜ್ಯದ ಬಗ್ಗೆ ಅನುಸರಿಸುತ್ತಿರುವ ಮಲತಾಯಿ ಧೋರಣೆಯ ವಿರುದ್ದವಾಗಿದೆ. ಶೋಭಾ ಅವರಿಗೆ ಸಚಿವಸ್ಥಾನ ಸಿಗದಿದ್ದರೆ ಅದಕ್ಕೆ ನಾವು ಹೊಣೆಯಲ್ಲ ಎಂದರು.

ರಾಜ್ಯ ಸರಕಾರ ಸತ್ತು ಹೋಗಿದೆ ನಿರ್ಜೀವವಾಗಿದೆ ಎಂದೆಲ್ಲ ಹೇಳುತ್ತಿರುವ ವಿರೋಧ ಪಕ್ಷದ ನಾಯಕರುಗಳು ಮೊದಲು ಅಂಕಿ ಅಂಶಗಳನ್ನು ಪರಿಶೀಲಿಸಿ ಮಾತನಾಡಲಿ ಗಾಳಿಯಲ್ಲಿ ಗುಂಡು ಹೊಡೆಯುವುದನ್ನು ನಿಲ್ಲಿಸಲಿ. ಅದನ್ನು ಪರಿಶೀಲಿಸಿದರೆ ರಾಜ್ಯ ಸರಕಾರ ಹೇಗೆ ಕೆಲಸ ಮಾಡುತ್ತಿದೆ ಎಂದು ತಿಳಿಯಲು ಸಾಧ್ಯವಿದೆ ರಾಜ್ಯದ ಎಲ್ಲ ಜನರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಟ್ಟಕಡೆಯ ನಾಗರಿಕರಿಗೂ ಸೌಲಭ್ಯಗಳು ಸಿಗಬೇಕೆಂದು ಪ್ರಯತ್ನಿಸುತ್ತಿದೆ ಎಂದು ಐವಾನ್ ಡಿಸೋಜ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು