Wednesday, January 22, 2025
ಸುದ್ದಿ

ಉಡುಪಿ ; ಜೋಪಡಿಯಲ್ಲಿ ಮಗು ಜನನ ; ಅಸಹಾಯಕತೆಗೆ ಸ್ಪಂದನೆ – ಕಹಳೆ ನ್ಯೂಸ್

ಕೊಡಂಕೂರು ಬಯಲು ಪ್ರದೇಶದಲ್ಲಿ ಜೋಪಡಿ ಕಟ್ಟಿಕೊಂಡು, ಬದುಕು ಸಾಗಿಸುತ್ತಿದ್ದ ಅಲೆಮಾರಿ ಜನಾಂಗದ ಗರ್ಭಿಣಿ ಮಹಿಳೆಯೊರ್ವಳು, ಪ್ರಸವ ವೇದನೆಯಿಂದ ಅಸಹಾಯಕಳಾಗಿ ನರಳುತ್ತಿರುವಾಗ, ಸಮಾಜಸೇವಕ ವಿಶು ಶೆಟ್ಟಿ ಅವರು ನೆರವಿಗೆ ಬಂದು ಮೂಲ ಸೌಕರ್ಯಕ್ಕಾಗಿ ತುರ್ತು ಧನ ಸಹಾಯ ಮಾಡಿ ಮಾನವಿಯತೆ ಮರೆದ ಘಟನೆ ಶನಿವಾರ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಷಯ ತಿಳಿದ ವಿಶು ಶೆಟ್ಟಿ ಅವರು 108 ಅಂಬ್ಯುಲೆನ್ಸ್ ನೊಂದಿಗೆ ಧಾವಿಸಿ ಬಂದಿದ್ದಾರೆ. ಶುಶ್ರೂಕ ಸಿಬ್ಬಂಧಿಗಳು ಸ್ಥಳಕ್ಕೆ ಬರುವ ಮೊದಲೇ ಜೋಪಡಿಯಲ್ಲಿ ಗರ್ಭಿಣಿ ಮಹಿಳೆ ಗಂಡು ಮಗುವಿಗೆ ಜನ್ಮವೆತ್ತಿದ್ದಾಳೆ. ನಂತರ ಸಿಬ್ಭಂದಿಗಳು ಪ್ರಾಥಮಿಕ ಚಿಕಿತ್ಸೆ ನೀಡಿ ಸರಕಾರಿ ಹೆರಿಗೆ ಆಸ್ಪತ್ರೆಗೆ ದಾಖಲು ಪಡಿಸಿದ್ದಾರೆ. ಗರ್ಭಿಣಿ ಮಹಿಳೆಯನ್ನು ಶಿರಸಿ ಮೂಲದ ಜಲಕ್ಕ (24 ವ)ಎಂದು ತಿಳಿದು ಬಂದಿದೆ. ಪ್ರಸವದ ದಿನಗಳು ಹತ್ತಿರ ಇರುವಾಗ ಪತಿ ಕೃಷ್ಣ ಕೆಲಸಕ್ಕೆ ತೆರಳಿದ್ದು, ಮಹಿಳೆಗೆ ಅಸಹಾಯಕತೆ ಎದುರಾಯಿತೆಂದು ತಿಳಿದು ಬಂದಿದೆ. ವಿಶು ಶೆಟ್ಟಿ ಈ ಭಾಗದಲ್ಲಿ ಸಮಾಜ ಸೇವಕ ಎಂದೇ ಹೆಸರುವಾಸಿಯಾದವರು.

ಜಾಹೀರಾತು
ಜಾಹೀರಾತು
ಜಾಹೀರಾತು