Wednesday, January 22, 2025
ಸುದ್ದಿ

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆ – ಕಹಳೆ ನ್ಯೂಸ್

ಕಾರವಾರ: ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮುಖ್ಯವಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯ ಗೊಂದಲಗಳ ಬಗ್ಗೆ ಮತ್ತು ಇದರ ಕುರಿತು ಸಂಪೂರ್ಣವಾದ ಮಾಹಿತಿ ಗ್ರಾಮೀಣ ಭಾಗಕ್ಕೆ ಇದುವರೆಗೂ ತಲುಪದಿರುವ ಬಗ್ಗೆ ಚರ್ಚಿಸಿ ಶೀಘ್ರವೇ ಸಮಸ್ಯೆಯನ್ನು ಬಗೆಹರಿಸುವಂತೆ ಒತ್ತಾಯಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

(ಕರ್ನಾಟಕ ಪಬ್ಲಿಕ್ ಸ್ಕೂಲ್) ಯೋಜನೆಯಡಿಯಲ್ಲಿ ಈಗಾಗಲೆ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ 5 ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗ ಪ್ರಾರಂಭವಾಗಿದ್ದು, ಸರ್ಕಾರ ಒಂದು ಶಾಲೆಯಲ್ಲಿ ಆಂಗ್ಲ ಮಾಧ್ಯಮ ವಿಭಾಗಕ್ಕೆ ಕೆವಲ 30 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾತಿ ಕಲ್ಪಿಸಿದ್ದು ಉಳಿದವರು ಕನ್ನಡ ಮಾಧ್ಯಮಕ್ಕೆ ದಾಖಲಾಗುತ್ತಿದ್ದರು. ಆದರೆ ಮುಖ್ಯಮಂತ್ರಿಗಳು ಹೆಚ್ಚುವರಿ ವಿಭಾಗಕ್ಕೆ ಅನುಮತಿ ನೀಡುವ ಕುರಿತು ಮಾಧ್ಯಮಗಳ ಮೂಲಕ ಘೋಷಿಸಿದ್ದು, ಇದರಿಂದ ಪಾಲಕರು ಮಕ್ಕಳನ್ನು ಕನ್ನಡ ವಿಭಾಗಕ್ಕೂ ದಾಖಲಿಸದೆ ಕಾಯುತ್ತಿದ್ದಾರೆ. ಈ ಕುರಿತು ಕೂಡಲೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಪಿಎಸ್ ಆರಂಭವಾದ ಶಾಲೆಗಳ ಸಮೀಪದ ಅಂಗನವಾಡಿಗಳು ಮಕ್ಕಳ ಕೊರತೆಯಿಂದ ಮುಚ್ಚುವ ಸ್ಥಿತಿಗೆ ಬಂದಿದ್ದು, ಅಲ್ಲಿಯ ಕಟ್ಟಡ, ಮೂಲಭೂತ ಸೌಕರ್ಯಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಭದ್ರತೆ ಏನು ಎಂಬುವುದರ ಬಗ್ಗೆ ಚರ್ಚಿಸಲಾಗಿದೆ.

ಸರ್ಕಾರದ ವಸತಿಯೋಜನೆಯಡಿಯಲ್ಲಿ ನಿರ್ಮಾಣವಾಗುವ ಮನೆಗಳ ಲೋಪದೋಷಕ್ಕೆ ಸಂಬಂಧಿಸಿದಂತೆ ಪ್ರಕರಣಗಳು ಗ್ರಾ. ಪಂ ಮತ್ತು ತಾ. ಪಂ. ಗಳಿಂದ ಸ್ವಿಕೃತಿಯಾಗಿ 5 ರಿಂದ 6 ತಿಂಗಳುಗಳು ಕಳೆದರೂ ಜಿ. ಪಂಚಾಯತದ ವಸತಿ ವಿಭಾಗದಲ್ಲಿ ಯಾವುದೇ ಕ್ರಮ ಆಗದಿರುವುದರ ಕುರಿತು ತಕ್ಷಣ ಕ್ರಮವಹಿಸುವಂತೆ ಒತ್ತಾಯಿಸಲಾಗಿದೆ.

ಉಳಿದಂತೆ ಕ್ಷೇತ್ರದ ಹತ್ತು ಹಲವು ಸಮಸ್ಯೆಗಳ ಬಗ್ಗೆ ಕೆಡಿಪಿ ಸಭೆಯಲ್ಲಿ ಪ್ರಶ್ನಿಸಿ , ಆ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಾಯಿತು.