Tuesday, January 21, 2025
ಸುದ್ದಿ

ಬಿಹಾರ್ ನಲ್ಲಿ ಹೆಚ್ಚಿದ ಬಿಸಿ ಗಾಳಿ – ಕಹಳೆ ನ್ಯೂಸ್

ಪಟ್ನಾ: ಮುಂಗಾರು ಮಳೆ ಪ್ರವೇಶದ ಬಳಿಕವೂ ಬಿಸಿ ಗಾಳಿ ಜನರ ಜೀವವನ್ನು ಹಿಂಡುತ್ತಿದೆ. ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಬಿಸಿ ಗಾಳಿ ಮುಂದುವರೆದಿದ್ದು, ಜನರ ಜೀವ ಬಲಿ ತೆಗೆದುಕೊಳ್ಳುತ್ತಿದೆ. ಬಿಹಾರದ ಗಯಾದಲ್ಲಿ ಒಂದೇ ದಿನ 12ಮಂದಿ ಬಿಸಿಗಾಳಿಗೆ ಬಲಿಯಾಗಿದ್ದಾರೆ. ಇನ್ನು ಗಯಾದಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ 25ಕ್ಕೂ ಅಧಿಕ ಬಿಸಿಗಾಳಿಗೆ ತುತ್ತಾಗಿರುವ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಸತ್ತ 12 ಜನರಲ್ಲಿ 7 ಮಂದಿ ಗಯಾ, ಇಬ್ಬರು ಔರಂಗಾಬಾದ್, ಛಾತ್ರಾ, ಶೇಖ್‍ಪುರ, ನಾವಡಾದಿಂದ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಪರಿಸ್ಥಿತಿ ನಿರ್ವಹಣೆಗೆ ವಿಶೇಷ ವೈದ್ಯರ ತಂಡವನ್ನು ಬಿಹಾರ ಸರ್ಕಾರ ರಚಿಸಿದ್ದು, ಎಲ್ಲಾ ತುರ್ತು ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿದೆ. ಇದಕ್ಕಾಗಿ 6 ಹಿರಿಯ ವೈದ್ಯರು ಹಾಗೂ 10 ಕಿರಿಯ ವೈದ್ಯರ ತಂಡವನ್ನು ರಚಿಸಲಾಗಿದೆ. ಮೃತರ ಕುಟುಂಬಗಳಿಗೆ ನಾಲ್ಕು ಲಕ್ಷ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ. ಮೃತರ ಅಂತ್ಯಕ್ರಿಯೆಗೆ ತಲಾ ಇಪ್ಪತ್ತು ಸಾವಿರ ನೀಡಲು ಕೂಡ ಸರ್ಕಾರ ಘೋಷಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು