Tuesday, January 21, 2025
ಸುದ್ದಿ

ಸೇವೆಗೆ ದೊರಕುತಿಲ್ಲ ಬಿಎಸ್ಎನ್ಎಲ್ ನೆಟ್‍ವರ್ಕ್ : ಉಪಯೋಗಕ್ಕೆ ಬಾರದ ಬಿಎಸ್ಎನ್ಎಲ್ ಟವರಿನ ಲೋಪ ಖಂಡಿಸಿ ಪ್ರತಿಭಟನೆ – ಕಹಳೆ ನ್ಯೂಸ್

ಹರಿಹರ ಪಳ್ಳತ್ತಡ್ಕ ಹಾಗೂ ಸುತ್ತಮುತ್ತಲ ಜನತೆ ಸರಕಾರಿ ಸಾಮ್ಯದ ಬಿಎಸ್ಎನ್ಎಲ್ ಮೊಬೈಲ್ ಸೇವೆಯನ್ನು ಅವಲಂಬಿತರಾಗಿದ್ದು ಹರಿಹರದಲ್ಲಿ ಈಗ ಕಾರ್ಯಚರಿಸುತ್ತಿರುವ ಟವರ್ ಬಹುತೇಕ ಅವಧಿಯಲ್ಲಿ ಸೇವೆಗೆ ದೊರಕುತಿಲ್ಲ. ಇದರಿಂದಾಗಿ ಸ್ಥಳೀಯರು ಆಕ್ರೋಶಗೊಂಡಿದ್ದು ವಿನೂತನ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರೆಂಟು ಇಲ್ಲದಾಗ ಕಣ್ಮರೆಯಾಗುತಿದ್ದ ಸಿಗ್ನಲ್ ಇತ್ತೀಚೆಗೆ ಕರೆಂಟು ಇದ್ದಾಗಲು ಇರುತಿಲ್ಲ. ರಾತ್ರಿ ಎಂಟರ ಆಸುಪಾಸಿನ ವೇಳೆಗೆ ನಿತ್ಯವೂ ಮೊಬೈಲ್ ಸ್ತಗಿತಗೊಳ್ಳುತ್ತಿದೆ. ಗುಡುಗು, ಮಿಂಚು ಇಲ್ಲದೆ ಶುಭ್ರ ವಾತಾವರಣವಿದ್ದು ಕರೆಂಟು ಇದ್ದರು ನೆಟ್‍ವರ್ಕು ಸ್ತಗಿತವಾಗುತ್ತಿರುವ ಉದ್ದೇಶ ಬಳಕೆದಾರರಿಗೆ ಅರಿಯದಾಗಿದೆ. ಈ ಕುರಿತು ನಿಗಮದ ಅಧಿಕಾರಿಗಳನ್ನು ಹಲವು ಭಾರಿ ವಿಚಾರಿಸಿ ಎಚ್ಚರಿಸಲಾಗಿದೆ. ಅಲ್ಲಿ 23 ಗಂಟೆ ನೆಟ್‍ವರ್ಕ್ ಇರುತ್ತದೆ ಅಂತ ಹಾರಿಕೆಯ ಉತ್ತರ ಬರುತ್ತಿದೆ. ಅಧಿಕಾರಿಗಳ ಇಷ್ಟೊಂದು ನೆಗ್‍ಲೆಕ್ಟ್ ಮತ್ತು ಜನಸಾಮಾನ್ಯರಿಗೆ ಬಳಕೆಗೆ ಸಿಗಬೇಕಿರುವ ಟವರು ಇದ್ದು ಯಾವುದೇ ಪ್ರಯೋಜನವಿರುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಾಗಿ ಉಪಯೋಗಕ್ಕೆ ಬಾರದ ಟವರಿನ ಸೇವೆಯಲ್ಲಿನ ಲೋಪ ಖಂಡಿಸಿ. ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಛೀಮಾರಿ ಹಾಕುವ ಸಲುವಾಗಿ ಇನ್ನೆರಡು ದಿನದೊಳಗೆ ಸೂಕ್ತ ಕ್ರಮ ಜರಗಿಸದೇ ಹೋದಲ್ಲಿ ದಿನಾಂಕ ಜೂ.18ಕ್ಕೆ ಮಂಗಳವಾರ 10-00ಕ್ಕೆ ಟವರಿಗೆ ತರಕಾರಿ ಬಳ್ಳಿಗಳನ್ನು ಹರಿಯ ಬಿಡುವ ವಿನೂತನ ಪ್ರತಿಭಟನೆ ನಡೆಯಲಿದೆ. ಎಲ್ಲ ಬಳಕೆದಾರರು ಈ ವಿಶಿಷ್ಟ ವಿನೂತನ ಪ್ರತಿಭಟನೆಗೆ ಸ್ವಯಂ ಪ್ರೇರಿತರಾಗಿ ಆಗಮಿಸಿ ಈ ಅಣಕು ಕಾರ್ಯದಲ್ಲಿ ಭಾಗವಹಿಸಲು ನೊಂದ ಬಳಕೆದಾರರು ಕೋರಿದ್ದಾರೆ.