Tuesday, January 21, 2025
ಸುದ್ದಿ

ಪಾಕಿಸ್ತಾನ ತಂಡಕ್ಕೆ ಹೋಲಿಸಿದ್ರೆ ಭಾರತ ತಂಡ ಬಲಿಷ್ಠವಾಗಿದೆ-ಕಪಿಲ್ ದೇವ್ – ಕಹಳೆ ನ್ಯೂಸ್

1983ರಲ್ಲಿ ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಮಾಜಿ ನಾಯಕ ಕಪಿಲ್ ದೇವ್, ಭಾರತ-ಪಾಕಿಸ್ತಾನ ಪಂದ್ಯಕ್ಕೂ ಮುನ್ನ ಮಹತ್ವದ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನ ತಂಡಕ್ಕೆ ಹೋಲಿಸಿದ್ರೆ ಭಾರತ ತಂಡ ಬಲಿಷ್ಠವಾಗಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ. ಇಂದು ನಡೆಯುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಪಾಕಿಸ್ತಾನ ತಂಡವನ್ನು ಸುಲಭವಾಗಿ ಸೋಲಿಸಲಿದೆಯಂತೆ.

ಎರಡೂ ತಂಡಗಳಲ್ಲಿ ಭಾರತ ತಂಡ ಬಲಿಷ್ಠವಾಗಿದೆ. ನಾನು ಭಾರತೀಯ ಎನ್ನುವ ಕಾರಣಕ್ಕೆ ಇದನ್ನು ಹೇಳುತ್ತಿಲ್ಲ ನಾವು ಆಟವಾಡುವ ಸಂದರ್ಭದಲ್ಲಿ ಪಾಕಿಸ್ತಾನ ತಂಡ ಬಲಿಷ್ಠವಾಗಿತ್ತು. ಆದರೆ ಈಗ ಭಾರತ ತಂಡ ಬಲ ಹೊಂದಿದೆ. ಪಾಕಿಸ್ತಾನದ ವಿರುದ್ಧ 10 ಪಂದ್ಯಗಳನ್ನು ಭಾರತ ಆಡಿದರೆ ಅದರಲ್ಲಿ 7 ಗೆಲುವು ಭಾರತಕ್ಕೆ ಸಿಗಲಿದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.
ಕಪಿಲ್ ದೇವ್, ಜಸ್ಪ್ರಿತ್ ಬೂಮ್ರಾ ಹಾಗೂ ವಿರಾಟ್ ಕೊಹ್ಲಿ ಬೆಸ್ಟ್ ಎಂದಿದ್ದು, ಮಹೇಂದ್ರ ಸಿಂಗ್ ಧೋನಿಯನ್ನು ಹೊಗಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು