Tuesday, January 21, 2025
ಸುದ್ದಿ

ಮಹಿಳಾ ಪೊಲೀಸ್ ಅಧಿಕಾರಿಯನ್ನು ನಟ್ಟ ನಡು ಬೀದಿಯಲ್ಲೇ ಬೆಂಕಿ ಹಚ್ಚಿ ಕೊಲೆ – ಕಹಳೆ ನ್ಯೂಸ್

ಮಹಿಳಾ ಪೊಲೀಸ್ ಅಧಿಕಾರಿಯನ್ನು ನಟ್ಟ ನಡು ಬೀದಿಯಲ್ಲೇ ಬೆಂಕಿ ಹಚ್ಚಿ ಕೊಂದು ಹಾಕಿರುವ ಅಮಾನವೀಯ ಘಟನೆ ಕೇರಳದ ಅಲಪ್ಪುಳ ಜಿಲ್ಲೆ ವಲ್ಲಿಕುನ್ನಂ ಬಳಿಯ ಕಾಂಜಿಪುಳ ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಪೋಲೀಸ್ ಅಧಿಕಾರಿಯನ್ನು ಸೌಮ್ಯ ಪುಷ್ಪಾಕರನ್(30) ಎಂದು ಗುರುತಿಸಲಾಗಿದೆ. ಈಕೆ ವಲ್ಲಿಕುನ್ನಂ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿ ಪೋಲೀಸ್ ಅಧಿಕಾರಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.
ಇನ್ನು ಬೆಂಕಿ ಹಚ್ಚಿದ ಆರೋಪಿಯನ್ನು ಏಜಾಜ್ ಎಂದು ಗುರುತಿಸಲಾಗಿದ್ದು ಆತ ಳುವಾ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಘಟನೆಯಲ್ಲಿ ಆತನಿಗೂ ಸಹ ಗಾಯಗಳಾಗಿದ್ದು ಅವನನ್ನು ವಶಕ್ಕೆ ಪಡೆದಿರುವ ಪೋಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತ ಪೋಲೀಸ್ ಅಧಿಕಾರಿಗೆ ಎರಡು ಮಕ್ಕಳಿದ್ದು ಗಂಡ ಮತ್ತು ಮಕ್ಕಳನ್ನ ಅಗಿಲಿದ್ದಾರೆ ಘಟನೆಗೆ ಕಾರಣವಿನ್ನೂ ತಿಳಿದು ಬಂದಿಲ್ಲ.