Monday, January 20, 2025
ಸುದ್ದಿ

ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ) ಮಂಗಳೂರು ತಾಲೂಕು ಘಟಕದಿಂದ ಶಾಲೆಯ ಬಡಮಕ್ಕಳಿಗೆ ಕೊಡೆ ಮತ್ತು ಬ್ಯಾಗ್ ವಿತರಣೆ – ಕಹಳೆ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ) ಮಂಗಳೂರು ತಾಲೂಕು ಘಟಕದಿಂದ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಗಾಂಧಿನಗರ, ಲೆಡಿಹಿಲ್, ಮಂಗಳೂರು ಮತ್ತು ಬಸ್ತಿ ಗಾರ್ಡನ್ ಶಾಲೆಯ ಬಡಮಕ್ಕಳಿಗೆ ಕೊಡೆ ಮತ್ತು ಬ್ಯಾಗ್ ವಿತರಣೆ ಮಾಡಿದರು. ಜಿಲ್ಲೆಯಲ್ಲಿ ಸದಾ ಸುದ್ದಿಯಲ್ಲಿರುವ ದ.ಕ.ಜಿ.ಮರಾಟಿ ಸಂರಕ್ಷಣಾ ಸಮಿತಿಯು 216 ಬಡಮಕ್ಕಳಿಗೆ ಕೊಡೆ ಮತ್ತು ಬ್ಯಾಗ್ ವಿತರಣೆ ಮಾಡುವ ಮೂಲಕ ಜಿಲ್ಲೆಯ ಜನರ ಪ್ರಶಂಸೆಗೆ ಕಾರಣವಾಯಿತು. ಯಾವಾಗಲೂ ಬಡವರ ಸೇವೆಯಲ್ಲಿ ನಿರಂತರ ಸೇವೆಯನ್ನು ಮಾಡುತ್ತಿರುವ ಸಮಿತಿಯು ಅದ್ಭುತ ಕಾರ್ಯವನ್ನು ಇಂದು ಗಾಂಧಿನಗರ ಶಾಲೆಯ ಕಾರ್ಯಕ್ರಮದಲ್ಲಿ ವಿತರಿಸಿತು. ಕಾರ್ಯಕ್ರಮದಲ್ಲಿ ಶಾಲೆಯ ಮಾನ್ಯ ಮುಖ್ಯ ಶಿಕ್ಷಕರಾದ ಶ್ರೀಮತಿ ಯಶೋಧ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಜಿಲ್ಲಾ ಮರಾಟಿ ನೆರವು ಸಂಚಾಲಕ ಮಂಜುನಾಥ ನಾಯ್ಕ, ಮಂಗಳೂರು ಘಟಕದ ಮರಾಟಿ ನೆರವು ಸಂಚಾಲಕ ಬಾಲಕೃಷ್ಣ ನಾಯ್ಕ, ಜಿಲ್ಲಾ ಅಧ್ಯಕ್ಷ ಆಶೋಕ್ ನಾಯ್ಕ, ಮಂಗಳೂರು ತಾಲೂಕು ಅಧ್ಯಕ್ಷೆ ವೀಣಾಲತಾ ಮತ್ತು ಸಮಿತಿಯ ವಿನಯ್, ಕುಶಾಲಪ್ಪ, ಜಿಲ್ಲಾ ನಾರಾಯಣ, ಕುಶಾಲಪ್ಪ ಕಡಬ, ಚಿತ್ರಾಲತಾ, ಸಂದೀಪ್ ಮತ್ತು ಹರೀಶ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು