Friday, November 22, 2024
ಕ್ರೀಡೆಸುದ್ದಿ

ಪಾಕಿಸ್ತಾನ ವಿರುದ್ಧ 7ನೇ ಐತಿಹಾಸಿಕ ಗೆಲುವು ಸಾಧಿಸಿದ ಭಾರತ – ಕಹಳೆ ನ್ಯೂಸ್

ವಿಶ್ವಕಪ್‍ನಲ್ಲಿ ಪಾಕಿಸ್ಥಾನ ವಿರುದ್ಧ ಭಾರತದ ಗೆಲುವಿನ ಅಭಿಯಾನ 7ನೇ ಪಂದ್ಯಕ್ಕೆ ವಿಸ್ತರಿಸಿದೆ. ಕ್ರಿಕೆಟ್ ಜಗತ್ತು ಕುತೂಹಲದಿಂದ ವೀಕ್ಷಿಸಿದ ಈ ಹೋರಾಟದಲ್ಲಿ ಭಾರತ ಮತ್ತೆ ಆಲ್‍ರೌಂಡ್ ಪ್ರದರ್ಶನ ನೀಡಿ ತನ್ನ ಸಾಂಪ್ರದಾಯಿಕ ಎದುರಾಳಿಯನ್ನು ಮಣಿಸಲು ಯಶಸ್ವಿಯಾಗಿದೆ.
ಮಳೆಯೂ ಪಾಕಿಸ್ಥಾನ ನೆರವಿಗೆ ಬರಲಿಲ್ಲ. ಡಕ್‍ವರ್ತ್ ಲೂಯಿಸ್ ನಿಯಮದಡಿ ಭಾರತ 89 ರನ್ನುಗಳಿಂದ ಪಾಕಿಸ್ಥಾನದ ವಿರುದ್ಧ ಜಯಭೇರಿ ಬಾರಿಸಿದೆ.

ಆರಂಭಿಕ ರೋಹಿತ್ ಶರ್ಮ ಅವರ ಸ್ಫೋಟಕ ಶತಕ ಮತ್ತು ನಾಯಕ ಕೊಹ್ಲಿ ಅವರ ಬಿರುಸಿನ 77 ರನ್ನಿನಿಂದ ಭಾರತ 5 ವಿಕೆಟಿಗೆ 336 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಪಾಕಿಸ್ಥಾನ ಮಳೆ ಬಂದು ಆಟ ನಿಂತಾಗ 35 ಓವರ್‍ ಗಳಲ್ಲಿ 6 ವಿಕೆಟಿಗೆ 166 ರನ್ ಗಳಿಸಿ ಒದ್ದಾಡುತ್ತಿತ್ತು. ಆ ಬಳಿಕ ಡಿಎಲ್ ನಿಯಮದಡಿ 40 ಓವರ್‍ ಗಳಲ್ಲಿ 302 ರನ್ ಗಳಿಸುವ ಗುರಿ ಪಡೆಯಿತು. ಆದರೆ ಪಾಕಿಸ್ಥಾನ 40 ಓವರ್‍ ಗಳಲ್ಲಿ 212 ರನ್‍ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು