Monday, January 20, 2025
ಸುದ್ದಿ

ಧರ್ಮಸ್ಥಳ ಪೋಲೀಸ್ ಠಾಣಾಧಿಕಾರಿಗಳು ಮತ್ತು ಇತರೇ ಸಿಬ್ಬಂದಿಯಿಂದ ಶ್ಲಾಘನೀಯ, ಮಾದರಿ ಕಾರ್ಯಕ್ರಮ – ಕಹಳೆ ನ್ಯೂಸ್

ಪೋಲೀಸ್ ಎಂದಾಕ್ಷಣ ಬೆಚ್ವಿಬಿದ್ದು ನೋಡುವ ಕಾಲವಿತ್ತು. ಆದರೆ ಈಗ ಹಾಗಿಲ್ಲ. ಧರ್ಮಸ್ಥಳ ಪೋಲೀಸ್ ಠಾಣಾ ಅಧಿಕಾರಿಗಳು ಮತ್ತು ಇತರೇ ಸಿಬ್ಬಂದಿಯ ಕಾರ್ಯವೊಂದು ಅಂತಹ ವಾತಾವರಣವನ್ನು ಬದಲಾಯಿಸುವಂತೆ ಮಾಡಿ ಇದೀಗ ಎಲ್ಲೆಡೆ ಪ್ರಶಂಸೆಗೊಳಗಾಗಿದೆ.

ತಾವೇ ಸ್ವತಃ ವಾಟ್ಸಪ್ ಗ್ರೂಪ್ ಮಾಡಿ, ಗ್ರೂಪ್‍ನ ಸದಸ್ಯರೇ ಚಂದಾಹಾಕಿ, ತಮ್ಮ ವ್ಯಾಪ್ತಿಯ ಪ್ರತಿ ಸರಕಾರಿ ಶಾಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ಕೂಲ್ ಬ್ಯಾಗ್, ನೋಟ್ ಪುಸ್ತಕಗಳು, ಕಂಪಾಸ್ ಬಾಕ್ಸ್ ಗಳನ್ನು ಖರೀದಿಸಿ ಉಚಿತವಾಗಿ ಹಂಚುವ ಮಾದರಿ ಕಾರ್ಯಕ್ರಮವನ್ನು ಧರ್ಮಸ್ಥಳ ಪೋಲೀಸ್ ಠಾಣಾ ವತಿಯಿಂದ ನಡೆಯಿತು. ಪಟ್ರಮೆಯ ಅನಾರು ಶಾಲೆಗೆ ಭೇಟಿಕೊಟ್ಟು ಸದ್ರಿ ಶಾಲಾ ಬಡ ಪ್ರತಿಭಾವಂತ ಮಕ್ಕಳಿಗೆ ತಮ್ಮ ಈ ಕೊಡುಗೆಯನ್ನು ಠಾಣಾಧಿಕಾರಿಯವರಾದ ಶ್ರೀ ಅವಿನಾಶ್ ರವರ ಮೂಲಕ ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭ ಮಾತನಾಡಿದ ಶ್ರೀ ಅವಿನಾಶ್ ರವರು, ತಾವು ಸ್ವತಃ ಸರಕಾರಿ ಶಾಲೆಯಲ್ಲೇ ಕಲಿತದ್ದಾಗಿದ್ದು, ಸರಕಾರಿ ಶಾಲಾ ಮಕ್ಕಳ ಪರಿಸ್ಥಿತಿಯ ಸಂಪೂರ್ಣ ಅರಿವು ತಮಗಿರುವ ಕಾರಣ ಸರಕಾರಿ ಶಾಲಾ ಮಕ್ಕಳನ್ನು ಆಯ್ಕೆ ಮಾಡಿ , ಅವರ ಮುಂದಿನ ಉತ್ತಮ ಭವಿಷ್ಯಕ್ಕೆ ತಮ್ಮ ಈ ಅಳಿಲು ಸೇವೆ ಸಲ್ಲಿಸುತ್ತಿದ್ದೆವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಪಟ್ರಮೆ ಗ್ರಾಮದ ಬೀಟ್ ಪೋಲೀಸರಾಗಿರುವ ಶ್ರೀ ಧರೇಶ್, ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ಕೃಷ್ಣಮೂರ್ತಿ, ಶಾಲಾ ಎಸ್‍ಡಿಎಂಸಿ ಅಧ್ಯಕ್ಷರಾದ ಶ್ರೀ ಶ್ಯಾಮರಾಜ್, ಉಪಾಧ್ಯಕ್ಷರಾದ ಶ್ರೀಮತಿ ಸುನಿತಾ ಹಾಗೂ ಇತರೇ ಎಸ್‍ಡಿಎಂಸಿ ಸದಸ್ಯರು, ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದರು.