Tuesday, January 21, 2025
ಸುದ್ದಿ

ಪಾಕ್ ಗ್ರಾಮಗಳ ಮೇಲೆ ಶೆಲ್ ದಾಳಿ: 11 ವರ್ಷದ ಬಾಲಕಿ ಸೇರಿದಂತೆ ಮೂವರು ನಾಗರಿಕರು ಗಾಯ – ಕಹಳೆ ನ್ಯೂಸ್

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯ ಉದ್ದಕ್ಕೂ ಕದನ ವಿರಾಮ ಉಲ್ಲಂಘಿಸಿ ಪಾಕ್ ಗ್ರಾಮಗಳ ಮೇಲೆ ಶೆಲ್ ದಾಳಿ ನಡೆಸಿದ ಸಂದರ್ಭದಲ್ಲಿ 11 ವರ್ಷದ ಬಾಲಕಿ ಸೇರಿದಂತೆ ಮೂವರು ನಾಗರಿಕರು ಗಾಯಗೊಂಡಿದ್ದಾರೆ.

‘ಭಾನುವಾರ ಸುಮಾರು ಸಂಜೆ 07:30ರ ವೇಳೆಯಲ್ಲಿ ಪಾಕಿಸ್ತಾನ ಸೇನೆಯು ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಚಾಲನೆ ನೀಡಿತು, ಸಣ್ಣ ಶಸ್ತ್ರಾಗಳ ಗುಂಡಿನ ದಾಳಿಯಿಂದ ಪ್ರಾರಂಭವಾಯಿತು ಮತ್ತು ನಂತರ ಪೂಂಚ್ ಸೆಕ್ಟರ್‍ ನಲ್ಲಿ ಎಲ್‍ಒಸಿ ಉದ್ದಕ್ಕೂ ಶೆಲ್ ದಾಳಿ ನಡೆಯಿತು’ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಶೆಲ್ ದಾಳಿಯಲ್ಲಿ, ಕಾನೋಟ್ ಫಾರ್ವರ್ಡ್ ಗ್ರಾಮದಲ್ಲಿ ಅಪ್ರಾಪ್ತ ಬಾಲಕಿ ಮರಿಯಮ್ ಬಿ ಮತ್ತು ಶಹಪುರ್ ಫಾರ್ವರ್ಡ್ ಗ್ರಾಮದಲ್ಲಿ ರಜಿಯಾ ಮತ್ತು ಪೋರ್ಟರ್ ಅಕ್ಬರ್ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು