Tuesday, January 21, 2025
ಸುದ್ದಿ

ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ದಾಳಿ ನಡೆಸಿದ ಆನೆ: ಅಪಾರ ಪ್ರಮಾಣದ ಕೃಷಿ ನಾಶ – ಕಹಳೆ ನ್ಯೂಸ್

ಮಂಡೆಕೋಲು: ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಮತ್ತೆ ಆನೆ ಹಾವಳಿ ಹೆಚ್ಚಾಗಿದೆ. ಭಾನುವಾರ ರಾತ್ರಿ ಆನೆ ದಾಳಿ ನಡೆಸಿ ಅಪಾರ ಪ್ರಮಾಣದ ಕೃಷಿಯನ್ನು ನಾಶ ಮಾಡಿದೆ.

ಮಂಡೆಕೋಲು ಗ್ರಾಮದ ಬೊಳುಗಲ್ಲು ಪ್ರದೇಶದಲ್ಲಿ ಅರಣ್ಯ ಇಲಾಖೆಯ ಆನೆಗೆ ತಡೆಗೆ ನಿರ್ಮಿಸಿದ ತಡೆಬೇಲಿಯನ್ನು ದಾಟಿ ಬಂದ ಆನೆಗಳು ಶ್ರೀಶ ಶರ್ಮ ಅವರ ತೋಟಕ್ಕೆ ಹಾನಿ ಮಾಡಿದೆ. ಬಾಳೇ, ಅಡಿಕೆ, ತೆಂಗು, ಗಿಡಗಳನ್ನು ಹಾನಿ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಆನೆಹಿಂಡಿನಲ್ಲಿ ಮರಿಆನೆಯೂ ಇದ್ದು ಅಪಾಯ ಹೆಚ್ಚಾಗಿದೆ. ಮರಿ ಆನೆ ಇದ್ದಾಗ ಆನೆಗಳು ಮನುಷ್ಯನ ಮೇಲೆ ದಾಳಿ ಮಾಡುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ. ಹೀಗಾಗಿ ಸಂಪರ್ಕ ವ್ಯವಸ್ಥೆಯೂ ಇಲ್ಲಿ ಸರಿಯಾಗಬೇಕಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು