Recent Posts

Tuesday, January 21, 2025
ಸುದ್ದಿ

ತಲ್ವಾರ್ ಪೇಟೆಯಲ್ಲಿ ಕೇಳಿಸತೊಡಗಿದೆ ವಸಿಷ್ಠ ಸಿಂಹನ ಸದ್ದು – ಕಹಳೆ ನ್ಯೂಸ್

ಸೋನಲ್ ಮತ್ತು ವಸಿಷ್ಠ ಸಿಂಹ ‘ತಲ್ವಾರ್ ಪೇಟೆ’ ಎನ್ನುವ ಹೊಸ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವಿಭಿನ್ನ ಟೈಟಲ್ ಮೂಲಕವೆ ಚಿತ್ರಾಭಿಮಾನಿಗಳ ಗಮನ ಸೆಳೆದಿದೆ ‘ತಲ್ವಾರ್ ಪೇಟೆ’ ಸಿನಿಮಾ.’

ಜಾಹೀರಾತು
ಜಾಹೀರಾತು
ಜಾಹೀರಾತು

ನಟ ವಸಿಷ್ಠ ಸಿಂಹ ಈಗಾಗಲೇ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ನಾಯಕನಾಗಿ, ಖಳನಟನಾಗಿ, ಪೋಷಕ ನಟನಾಗಿ ಎಲ್ಲಾ ರೀತಿಯ ಪಾತ್ರಗಳನ್ನು ನಿಭಾಯಿಸುತ್ತಿರುವ ವಸಿಷ್ಠ ಈಗ ‘ತಲ್ವಾರ್ ಪೇಟೆ’ ಚಿತ್ರದಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಇನ್ನು ಸೋನಲ್ ‘ಪಂಚತಂತ್ರ’ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿರುವ ನಟಿ. ‘ಪಂಚತಂತ್ರ’ ನಂತರ ‘ಬುದ್ಧಿವಂತ-2’ ಚಿತ್ರ ಅಭಿನಯಿಸುತ್ತಿರುವ ಸೋನಲ್ ಯೋಗರಾಜ್ ಭಟ್ರು ನಿರ್ದೇಶನದ ‘ಗಾಳಿಪಟ-2’ ಚಿತ್ರದಲ್ಲೂ ನಾಯಕಿಯಾಗಿ ಮಿಂಚುತ್ತಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇರುವ ಸೋನಲ್ ಈಗ ವಸಿಷ್ಠ ಜೊತೆ ‘ತಲ್ವಾರ್ ಪೇಟೆ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದ್ಹಾಗೆ ‘ತಲ್ವಾರ್ ಪೇಟೆ’ ಚಿತ್ರಕ್ಕೆ ರಾಮ್ ಲಕ್ಷ್ಮಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅವರೆ ಕಥೆ, ಚಿತ್ರಕಥೆ, ಮತ್ತು ಸಂಭಾಷಣೆ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇರುವ ಚಿತ್ರತಂಡ ಜುಲೈನಿಂದ ಚಿತ್ರೀಕರಣ ಪ್ರಾರಂಭಮಾಡಲಿದೆ.