Recent Posts

Tuesday, January 21, 2025
ರಾಜಕೀಯಸುದ್ದಿ

Jindal Land Deal: ಜಿಂದಾಲ್ ಮತ್ತು ಐಎಂಎ ಪ್ರಕರಣದಲ್ಲಿ ಮೌನ ಮುರಿದ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು? – ಕಹಳೆ ನ್ಯೂಸ್

ನವದೆಹಲಿ: ಜಿಂದಾಲ್ ಮತ್ತು ಐಎಂಎ ಪ್ರಕರಣ ಸಂಬಂಧ ಮೊದಲ ಬಾರಿಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ಮೌನ ಮುರಿದಿದ್ಧಾರೆ. ಈ ಕುರಿತಂತೆ ನಗರದಲ್ಲಿ ಮಾತಾಡಿದ ಅವರು, “ಮೈತ್ರಿ ಸರ್ಕಾರ ಜಿಂದಾಲ್‍ಗೆ ಭೂಮಿ ನೀಡುವ ವಿಚಾರದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಹಾಗಾಗಿ ಈ ವಿಚಾರ ಸಂಪುಟ ಉಪ ಸಮಿತಿಗೆ ನೀಡುವಂತೆ ನಾನೇ ಸಲಹೆ ನೀಡಿದ್ದೆ” ಎಂದರು.

ಇನ್ನು ಸರ್ಕಾರದ ಭಾಗವಾಗಿರುವ ಕಾರಣ ನಾನು ಜಿಂದಾಲ್ ಬಗ್ಗೆ ಏನು? ಮಾತನಾಡಲಿಕ್ಕೆ ಹೋಗಿಲ್ಲ. ಐಎಂಎ ಪ್ರಕರಣದ ಆರೋಪಿ ಮುನ್ಸೂರು ಅಲಿಖಾನ್ ಕೂಡ ಯಾರು? ಎಂದು ಗೊತ್ತಿಲ್ಲ. ಯಾವುದೋ ಕಾರ್ಯಕ್ರಮವೊಂದಕ್ಕೆ ರೋಷನ್ ಬೇಗ್ ಆತನನ್ನು ಕರೆದುಕೊಂಡು ಬಂದಿದ್ದರು. ಅಲ್ಲಿಯೇ ವೇದಿಕೆ ಮೇಲೆ ಮಸ್ಸೂರ್ ನನ್ನ ಜೊತೆಗೆ ಪೋಟೊ ತೆಗೆಸಿಕೊಂಡಿದ್ದ. ಈ ಪ್ರಕರಣದ ತನಿಖೆಯೂ ಎಸ್ಐಟಿ ಅಧಿಕಾರಿಗಳು ನಡೆಸುತ್ತಿದ್ಧಾರೆ” ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದಹಾಗೆ, ನಾನು ವೈಯಕ್ತಿಕ ಕೆಲಸದ ಮೇಲೆ ದೆಹಲಿಗೆ ಬಂದಿದ್ದೇನೆ. ಇಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಲಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸುದ್ದಿ ಕೇವಲ ಊಹಾಪೋಹ. ರಾಹುಲ್ ಗಾಂಧಿಯವರೊಂದಿಗೆ ಚರ್ಚೆ ಮಾಡುವ ನಿಮಗೆ ಹೇಳಲು ಸಾಧ್ಯವಿಲ್ಲ” ಎಂದರು ಮಾಜಿ ಸಿಎಂ ಸಿದ್ದರಾಮಯ್ಯನವರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇತ್ತೀಚೆಗಷ್ಟೇ ಜಿಂದಾಲ್ ಮತ್ತು ಐಎಂಎ ಪ್ರಕರಣದ ಬಗ್ಗೆ ಸಿದ್ದರಾಮಯ್ಯನವರು ಯಾಕೇ ಮಾತಾಡುತ್ತಿಲ್ಲ ಎಂದು ಬಿಜೆಪಿ ನಾಯಕರು ಪ್ರಶ್ನಿಸಿದ್ದರು. ಅಲ್ಲದೇ ಇದೇ ಸಿದ್ದರಾಮಯ್ಯ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿ, ಡ್ಯಾನ್ಸ್ ಮಾಡಿ, ತೊಡೆ ತಟ್ಟಿ ರಾಜ್ಯದ ಆಸ್ತಿ ಉಳಿಸೋರು ನಾವೇ ಎಂದಿದ್ದರು. ಆದರೀಗ 3,667 ಎಕರೆ ಸರ್ಕಾರಿ ಭೂಮಿ ವಿಚಾರದಲ್ಲಿ ಯಾಕೆ ಬಾಯಿ ಮುಚ್ಚಿಕೊಂಡಿದ್ದಾರೆ. ಸತ್ಯ ಹೇಳೋಕೆ ಅವರಿಗೆ ಬಾಯಿ ಇಲ್ಲವೇ ಎಂದು ಕಿಡಿಕಾರಿದ್ದರು.

ಹಾಗೆಯೇ ಐಎಂಎ ವಂಚನೆ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡದೇ ಹೋಗಬಹುದು. ಆದರೆ, ಜಿಂದಾಲ್ಗೆ ಭೂಮಿ ಪರಭಾರೆ ವಿಚಾರದಲ್ಲಿ ಹೋರಾಟ ಮುಂದುವರಿಸುತ್ತೇವೆ. ಹೋರಾಟ ಮಾಡದಿದ್ದರೆ ರಾಜ್ಯವನ್ನೇ ಮಾರುತ್ತಾರೆ. ನಾವು ಹೋರಾಟ ಪ್ರಾರಂಭಿಸಿದ ನಂತರವೇ ಉಪ ಸಮಿತಿ ರಚಿಸಿದ್ದಾರೆ. ಈ ಹಿಂದೆ ಜಾರ್ಜ್ ಸಹ ಜಿಂದಾಲ್ಗೆ ಭೂಮಿ ಪರಭಾರೆ ನೀಡುವ ಕುರಿತು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈಗ ಏನು ತಪ್ಪಿದೆ ಎಂದು ಹೇಳುತ್ತಿದ್ದಾರೆ. ಯಾರು ಏನೇ ಹೇಳಲಿ ಯಾವುದೇ ಕಾರಣಕ್ಕೂ ಆಸ್ತಿ ಮಾರಾಟ ಮಾಡಲು ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಬಿಜೆಪಿ ನಾಯಕರು ಸವಾಲ್ ಹಾಕಿದ್ದಾರೆ.