ಯೋಧ ಕುಲಭೂಷಣ್ ಕುಟುಂಬಕ್ಕೆ ಅಪಮಾನ ಖಂಡಿಸಿ ಪುತ್ತೂರಿನಲ್ಲಿ ಇಂದು ಸಂಜೆ 5.30ಕ್ಕೆ ಪಾಕಿಸ್ತಾನದ ಧ್ವಜ ಸುಟ್ಟು ಪ್ರತಿಭಟನೆ – ಬಜರಂಗದಳ
ಪುತ್ತೂರು : ಪಾಕಿಸ್ತಾನದಲ್ಲಿ ಬಂಧನಕ್ಕೆ ಒಳಗಾದ ಭಾರತದ ಯೋಧ ಕುಲಭೂಷಣ್ ಜಾದವ್ ಅವರನ್ನು ಭೇಟಿ ಮಾಡಲು ಅವರ ಕುಟುಂಬಕ್ಕೆ ವೀಸಾ ನೀಡಿತ್ತು. ಕುಟುಂಬಿಕರು ಭೇಟಿಯ ವೇಳೆ ಪಾಕಿಸ್ತಾನ ಕುಲಭೂಷಣ್ ಜಾದವ್ ಅವರ ಪತ್ನಿ ಹಾಗೂ ತಾಯಿಯ ಮಂಗಳಸೂತ್ರ, ಸಿಂಧೂರ ಹಾಗೂ ಕೈಬಳೆಗಳನ್ನು ತೆಗೆದುಹಾಕುವಂತೆ ಮಾಡಿತ್ತು.
ಮಹಾಭಾರತದಲ್ಲಿ ದ್ರೌಪದಿ ವಸ್ರಾಪಹರಣ ನಡೆದ ರೀತಿಯಲ್ಲಿ ಪಾಕ್ ವರ್ತನೆ ನಡೆಸಿದೆ,ಜಾಧವ್ ತಾಯಿ ಹಾಗೂ ಪತ್ನಿಗೆ ಹಿಂಸಾತ್ಮಕ ಅವಮಾನ ಮಾಡಿದ ಪಾಪಿ ಪಾಕಿಸ್ತಾನದ ವಿರುದ್ಧ ಇಂದು 29-12-2017 ಶುಕ್ರವಾರ ಸಂಜೆ 5:30 ಗಂಟೆಗೆ ಪುತ್ತೂರು ಬಸ್ ಸ್ಟ್ಯಾಂಡ್ ಬಳಿ ಪಾಕಿಸ್ತಾನದ ದ್ವಜವನ್ನು ಸುಟ್ಟು ಪ್ರತಿಭಟನೆ ಮಾಡಲಾಗುವುದು ಎಂದು ಪುತ್ತೂರು ಬಜರಂಗದಳ ಪತ್ರಿಕಾ ಪ್ರಕರಣೆ ನೀಡಿದೆ.